ಶೃಂಗೇರಿ: ನಮಗೆ ಅನ್ನ ನೀಡುತ್ತಿರುವ ಅನ್ನದಾತರನ್ನು ನಾವು ಮೊದಲು ರಕ್ಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕೃಷಿ ಕಾಯ್ದೆ ವಿರೋ ಧಿಸಿ ಮಂಗಳವಾರ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳುವಳಿಗೆ ಬೆಂಬಲವಾಗಿ ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ತಾನು ಬೆಳೆದ ಬೆಳೆಗೆ ಬೆಲೆಯನ್ನು ಬೇರೊಬ್ಬರು ನಿರ್ಧರಿಸಬಾರದು. ತಾನು ಬೆಳೆದ ಬೆಳೆದ ಬೆಳೆಗೆ ದರವನ್ನು ನಿರ್ಧರಿಸುವ ಹಕ್ಕು ರೈತನಿಗೆ ಇರಬೇಕು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ನಮ್ಮ ಹಕ್ಕು ಮಂಡಿಸುವ ಶಕ್ತಿ ರೈತರಿಗಿದೆ. ರೈತರನ್ನು ರಕ್ಷಣೆ ಮಾಡುವುದಕ್ಕಾಗಿ ಪಕ್ಷ ಬದ್ಧವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಎಚ್. ನಟರಾಜ್ ಮಾತನಾಡಿ, ರೈತರ ರಕ್ಷಣೆ ಮಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅನ್ನದಾತರನ್ನು ಕಡೆಗಣಿಸಿದರೆ ದೇಶ ಉಳಿಯದು. ರೈತರನ್ನು ಎಲ್ಲರೂ ಗೌರವಿಸಬೇಕು. ರೈತರಿಗೆ ವಿರುದ್ಧವಾದ ಕಾಯ್ದೆಯನ್ನು ಸರಕಾರ ಮೊದಲು ಹಿಂಪಡೆಯಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಡಾ| ಅಂಶುಮಂತ್, ಶಾಸಕ ಟಿ.ಡಿ. ರಾಜೇಗೌಡ, ಕಾಂಗ್ರೆಸ್ ಮುಖಂಡರಾದ ನಿಖೀತ್‌ಕುಮಾರ್, ಎಚ್.ಎಂ. ಸತೀಶ್, ದಿನೇಶ್ ಶೆಟ್ಟಿ, ಉಮೇಶ್ ಪುದುವಾಳ್, ಕೆ.ಟಿ. ಮಂಜುನಾಥ್, ಕೆ.ಎಂ. ರಮೇಶ್ ಭಟ್, ದಿನೇಶ್ ಹೆಗ್ಡೆ, ನಾರಾಯಣ ಮತ್ತಿತರರು ಇದ್ದರು.
ಓದಿ : ಕಂಪ್ಲಿಯಾದ್ಯಂತ ಸರಳ ಗಣರಾಜ್ಯೋತ್ಸವ