ಬಾಳೆಹೊನ್ನೂರು: ಇತ್ತೀಚೆಗೆ ಮಲೆನಾಡುಭಾಗದಲ್ಲಿ ಸುರಿದ ಅಕಾಲಿಕ ಮಳೆಗೆಉಂಟಾದ ಕಾಫಿ ಬೆಳೆಯ ನಷ್ಟದ ಬಗ್ಗೆಹಾಗೂ ಕಾಫಿ ಬೆಳೆಗಾರರ ಪ್ರಸ್ತುತಸಮಸ್ಯೆಗಳ ಕುರಿತು ಕಂದಾಯ ಸಚಿವಆರ್. ಅಶೋಕ್ ಅವರು ಭಾನುವಾರಚಿಕ್ಕಮಗಳೂರು ತಾಲೂಕಿನ ಖಾಂಡ್ಯಹೋಬಳಿಯಲ್ಲಿ ಪರಿಶೀಲನೆ ನಡೆಸಿದರು.
ಚಿಕ್ಕಮಗಳೂರಿನಿಂದ ಕೊಪ್ಪಕ್ಕೆಜನಸೇವಕ್ ಸಮಾವೇಶಕ್ಕೆ ತೆರಳುತ್ತಿದ್ದಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಖಾಂಡ್ಯ ಹೋಬಳಿಯ ಗೋರಿಗಂಡಿ·ಸಮೀಪದಲ್ಲಿ ಭೇಟಿ ಮಾಡಿ ಕಾಫಿ ಮತ್ತುಅಡಕೆ ಬೆಳೆಗಾರರ ಸಮಸ್ಯೆಯನ್ನು
ಆಲಿಸಿದರು.
ಗೋರಿಗಂಡಿಯ ಎಂ.ಜೆ.ಚಂದ್ರಶೇಖರ್ ಎಂಬುವವರ ಕಾಫಿತೋಟಕ್ಕೆ ತೆರಳಿ ಮಾಹಿತಿ ಪಡೆದರು.ಬೆಳೆಗಾರರ ಮನವಿ ಆಲಿಸಿ ಮಾತನಾಡಿದಸಚಿವ ಆರ್.ಅಶೋಕ್, ಕಾಫಿ ಬೆಳೆಗೆಕೇರಳ ಮಾದರಿಯಲ್ಲಿ ಬೆಂಬಲ ಬೆಲೆನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆಚರ್ಚಿಸುವುದಾಗಿ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯಎಂ.ಕೆ. ಪ್ರಾಣೇಶ್, ಜಿಲ್ಲಾ ಧಿಕಾರಿ ಡಾ|ಬಗಾದಿಗೌತಮ್, ಜಿಪಂ ಸದಸ್ಯೆ ಕವಿತಾಲಿಂಗರಾಜು, ಕಾಫಿ ಬೆಳೆಗಾರರಾದಎಂ.ಜೆ. ಚಂದ್ರಶೇಖರ್, ಶ್ರೀಧರ್,ಎಸ್.ವಿ. ಸುಬ್ರಹ್ಮಣ್ಯ ಇದ್ದರು.
ಓದಿ : ಕೊರೊನಾ ವ್ಯಾಕ್ಸಿನ್ ಅಪಪ್ರಚಾರಕ್ಕೆ ಕಿವಿಗೊಡಬೇಡಿ