Advertisement

ಮಕ್ಕಳಲ್ಲಿ ದೇಶಭಕ್ತಿ ಭಾವನೆ ಹೆಚ್ಚಿಸಿ: ರಂಭಾಪುರಿ ಶ್ರೀ

05:53 PM Jan 27, 2021 | Team Udayavani |

ಬಾಳೆಹೊನ್ನೂರು: ವಿವಿಧತೆಯಲ್ಲಿ ಏಕತೆಯನ್ನು ಕಂಡ ಭಾರತವು ಸರ್ವಜನಾಂಗದ ತೋಟವಾಗಿದ್ದು, ಸಮಾನವಾಗಿ ಬಾಳಲು ಸಂವಿಧಾನದಲ್ಲಿ
ಅವಕಾಶ ಮಾಡಿಕೊಟ್ಟಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.

Advertisement

ಶ್ರೀ ರಂಭಾಪುರಿ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಶ್ರೀ ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಆವರಣದಲ್ಲಿ 72ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.‌

ದೇಶದಲ್ಲಿ ಅವರವರ ಧರ್ಮಕ್ಕೆ ಅನುಗುಣವಾಗಿ ಧರ್ಮವನ್ನು ಪಾಲನೆ ಮಾಡಲು ಅವಕಾಶವಿದೆ. ಸಂವಿದಾನವು ಮೂಲಭೂತ ಹಕ್ಕುಗಳನ್ನು ನೀಡಿದ್ದು ಎಲ್ಲರೂ ಸಂವಿದಾನವನ್ನು ಗೌರವಿಸಬೇಕೆಂದು ಕರೆ ನೀಡಿದರು. ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಬಿ.ಕಣಬೂರು ಗ್ರಾಪಂ ನೂತನ ಸದಸ್ಯರಾದ ಎಂ.ಜೆ. ಮಹೇಶಾಚಾರ್‌, ಜಗದೀಶ್ಚಂದ್ರ, ಕೋಕಿಲಾ, ಪ್ರೌಡಶಾಲೆ ಮುಖ್ಯ ಶಿಕ್ಷಕ ಸದಾನಂದ, ದೈಹಿಕ ಶಿಕ್ಷಕ ಕಟ್ಟೇಗೌಡ, ಕುಲಕರ್ಣಿ, ರಮೇಶ್‌, ದಾರುಕಶಾಸ್ತ್ರಿ ಮತ್ತಿತರರು ಇದ್ದರು.

ಓದಿ :    ಹಿಂಸಾಚಾರದ ಎಫೆಕ್ಟ್: ಹೋರಾಟ ಇಬ್ಭಾಗ-ಪ್ರತಿಭಟನೆಯಿಂದ ಹಿಂದೆ ಸರಿದ 2 ಸಂಘಟನೆ

Advertisement

Udayavani is now on Telegram. Click here to join our channel and stay updated with the latest news.

Next