Advertisement

30ರಂದು ಚಿಕ್ಕಮಗಳೂರಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ

06:28 PM Jan 23, 2021 | Team Udayavani |

ಚಿಕ್ಕಮಗಳೂರು: ಅಖೀಲ ಭಾರತೀಯ ಸಾಹಿತ್ಯ ಪರಿಷತ್‌ ವತಿಯಿಂದ ಜ.30ರಂದು “ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ’ ಕುರಿತಂತೆ ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ.

Advertisement

ಗುರುವಾರ ಸಂಜೆ ನಗರದ ಸುವರ್ಣ ಮಾಧ್ಯಮಭವನದಲ್ಲಿ ಅಖೀಲ ಭಾರತೀಯ ಸಾಹಿತ್ಯ ಪರಿಷತ್‌ ಚಿಕ್ಕಮಗಳೂರು ಜಿಲ್ಲಾ ಘಟಕದ ಸಭೆ ನಡೆಸಲಾಯಿತು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ನಡೆಯುತ್ತಿರುವ ನಿಧಿ  ಸಮರ್ಪಣಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಪರಿಷದ್‌ ಸಾಹಿತ್ಯಾತ್ಮಕವಾಗಿಯೂ ಜನಜಾಗೃತಿಗಾಗಿ ರಾಜ್ಯಮಟ್ಟದಲ್ಲಿ ಕವಿಗೋಷ್ಠಿ ನಡೆಸುತ್ತಿದೆ ಎಂದು ಜಿಲ್ಲಾ ಸಂಯೋಜಕ ಪ್ರಭುಲಿಂಗಶಾಸ್ತ್ರಿ ತಿಳಿಸಿದರು.

ಇದನ್ನೂಓದಿ : 400 ಕೋಟಿ ರೂ. ಅನುದಾನಕ್ಕೆ ಮನವಿ

ಪ್ರಾರಂಭದಲ್ಲಿ ಜಿಲ್ಲಾ ಮಟ್ಟದಲ್ಲಿ ನಂತರ ವಿಭಾಗ ಮಟ್ಟದಲ್ಲಿ, ಕೊನೆಯಲ್ಲಿ  ರಾಜ್ಯಮಟ್ಟದಲ್ಲಿ ಹೀಗೆ ಮೂರುಹಂತದಲ್ಲಿ ಕವಿಗೋಷ್ಠಿ ಆಯೋಜಿಸಲು ಯೋಜಿಸಲಾಗಿದೆ.ಮೆಚ್ಚುಗೆ ಪಡೆದ ಕವನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತಂದು ದಾಖಲಿಸಲು ರಾಜ್ಯಾಧ್ಯಕ್ಷ ಪ್ರೊ| ಪ್ರೇಮಶೇಖರ್‌ ನೇತೃತ್ವದ ತಂಡ ಕಾರ್ಯಪ್ರವೃತ್ತವಾಗಿದೆ ಎಂದರು.

Advertisement

ಚಿಕ್ಕಮಗಳೂರು ಜಿಲ್ಲೆಯಲ್ಲೂ ಜ.30ರಂದು ಮಧ್ಯಾಹ್ನ 3.30ಕ್ಕೆ ನಗರದಲ್ಲಿ ಆಹ್ವಾನಿತ ಕವಿಗೋಷ್ಠಿಯನ್ನು ಹಿರೇಮಗಳೂರು ಕಣ್ಣನ್‌ ಅಧ್ಯಕ್ಷತೆಯಲ್ಲಿ ನಡೆಸಲು ಸಭೆ ತೀರ್ಮಾನಿಸಿತು.  ಈಗಾಗಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡವರನ್ನು ಸಂಪರ್ಕಿಸಿ “ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ’ ಕುರಿತಂತೆ ಮೂರು ನಿಮಿಷಗಳ ವಾಚನಕ್ಕೆ ಅನುಕೂಲವಾಗುವ ಕವನ ರಚಿಸುವಂತೆ ಕೋರಲು ನಿರ್ಧರಿಸಲಾಯಿತು.

ಹೊಳೆಹೊನ್ನೂರು ಪ್ರಶಾಂತ್‌ ಸಂಚಾಲಕತ್ವದಲ್ಲಿ ಶನಿವಾರ ಮಧ್ಯಾಹ್ನ ಶ್ರೀರಾಮನ ಅರ್ಚನೆಯೊಂದಿಗೆ ಕವಿತೆಗಳ ವಾಚನಕ್ಕೆ ಅವಕಾಶ ಕಲ್ಪಿಸಲಾಗುವುದು. ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಜಿಲ್ಲಾ ಸಮಿತಿ ಸದಸ್ಯರಾದ ಭಾಸ್ಕರ, ನಾಗಶ್ರೀ ತ್ಯಾಗರಾಜ್‌, ಸ್ಥಳೀಯ ಘಟಕದ ಸಂಚಾಲಕಿ ಲತಾ ಧರಣೇಂದ್ರ, ಸಹ ಸಂಚಾಲಕಿ ನಾಗಮಣಿ, ಚುಟುಕು ಕವಿ ಅರವಿಂದ ದೀಕ್ಷಿತ್‌, ಲೇಖಕ ಚಂದ್ರಶೇಖರ್‌, ವಿಶ್ರಾಂತ ಪ್ರಾಂಶುಪಾಲ ಎಚ್‌.ಎಸ್‌. ಪುಟ್ಟೇಗೌಡ, ದೀಪಕ, ದೊಡ್ಡಯ್ಯ, ಅರವಿಂದಕುಮಾರ್‌, ದತ್ತಾತ್ರಿ, ದಾಸ ಸಾಹಿತಿ ನಾರಾಯಣ ಮಲ್ಯ, ಪ್ರಶಾಂತಕುಮಾರ್‌ ಸಭೆಯಲ್ಲಿ ಇದ್ದರು.

ಇದನ್ನೂಓದಿ : ಪ್ರೊ| ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರ ಆರಂಭಿಸಲು ಒತ್ತಾಯಿಸಿ ಮನವಿ

Advertisement

Udayavani is now on Telegram. Click here to join our channel and stay updated with the latest news.

Next