Advertisement

ಓದಿನ ರುಚಿ ಹತ್ತಿಸಿದವರು ತೇಜಸ್ವಿ

04:46 PM Sep 11, 2021 | Team Udayavani |

ಕೊಟ್ಟಿಗೆಹಾರ: ತಮ್ಮ ವೈಚಾರಿಕಹಾಗೂ ವೈವಿಧ್ಯಮಯ ಬರಹಗಳಿಂದಯುವಪೀಳಿಗೆಗೆ ಓದಿನ ರುಚಿಹತ್ತಿಸಿದವರು ತೇಜಸ್ವಿ ಎಂದು ಸಾಹಿತಿರೇಖಾ ನಾಗರಾಜ್‌ರಾವ್‌ ಹೇಳಿದರು.

Advertisement

ಕೆ.ಪಿ. ಪೂರ್ಣಚಂದ್ರ ತೇಜಸ್ವಿಪ್ರತಿಷ್ಠಾನ ಹಾಗೂ ಕನ್ನಡ ಮತ್ತುಸಂಸ್ಕೃತಿ ಇಲಾಖೆಯ ವತಿಯಿಂದಕೊಟ್ಟಿಗೆಹಾರದಲ್ಲಿ ನಡೆದ “ತೇಜಸ್ವಿಓದು ಮೊಗೆದಷ್ಟು ಬೆರಗು ತೆರೆದಷ್ಟುಅರಿವು’ ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಪಾಕಕ್ರಾಂತಿ ಮತ್ತುಇತರ ಕಥೆಗಳು ಕೃತಿಯ ಬಗ್ಗೆ ಅವರು ಮಾತನಾಡಿದರು.

ತೇಜಸ್ವಿ ಅವರು ಪಾಕಕ್ರಾಂತಿ ಕೃತಿಯಲ್ಲಿ ನಿತ್ಯ ಬದುಕಿನ ಸಂಗತಿಗಳನ್ನು ಕಥೆಯಾಗಿಸಿದ್ದು ಅವರ ವಿಭಿನ್ನದೃಷ್ಟಿಕೋನದಿಂದಾಗಿ ಸಾಮಾನ್ಯಘಟನೆಯೂ ವಿಶೇಷ ಎನಿಸುವುದುಮತ್ತು ವಿಭಿನ್ನ ಒಳನೋಟಗಳಿಂದಸರ್ವೇ ಸಾಮಾನ್ಯವಾದ ನಿತ್ಯಜೀವನದ ಘಟನೆಗಳನ್ನು ನೋಡುವಕ್ರಮ ಓದುಗರನ್ನು ಸೂಜಿಗಲ್ಲಿನಂತೆಸೆಳೆಯುತ್ತದೆ ಎಂದರು.

ತೇಜಸ್ವಿ ಅವರ ಕುತೂಹಲ ಮತ್ತುಎಲ್ಲವನ್ನೂ ಗಮನಿಸುವಂತಹಮನಸ್ಥಿತಿ ಈ ಕೃತಿಯ ಕಥೆಗಳನ್ನುಕುತೂಹಲಕಾರಿಯಾಗಿಸಿವೆ. ಇಲ್ಲಿನಕಥೆಗಳನ್ನು ಓದಿದ ನಂತರ ಇವು ಓದುಗನ ಬದುಕಿನ ಅನುಭವವಗಳೆನೋ ಅನಿಸುವಷ್ಟು ಆಪ್ತವಾಗಿದೆ ಎಂದರು.

ಸಾಹಿತಿಗಳಾದ ನಾಗರಾಜ್‌ರಾವ್‌ಕಲ್ಕಟ್ಟೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿಪ್ರತಿಷ್ಠಾನದ ನಿರ್ವಾಹಕ ಆಕರ್ಷ್‌,ಕಾರ್ಯಕ್ರಮ ಸಂಯೋಜಕ ನಂದೀಶ್‌ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದಸ್ಯಾಮ್ಯುಯೆಲ್‌ ಹ್ಯಾರಿಸ್‌ ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next