Advertisement

ಮಾದಕ ವಸ್ತು ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ

05:16 PM Jun 28, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾದಕ ವಸ್ತು ಹಾವಳಿ ತಡೆಗಟ್ಟುವನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಎಚ್‌.ಅಕ್ಷಯ್‌ ತಿಳಿಸಿದ್ದಾರೆ.ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆನೀಡಿರುವ ಅವರು, ಮಾದಕ ವಸ್ತು ವಿರೋ ಧಿದಿನಾಚರಣೆ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆ ವಿವಿಧಪೋಸ್‌ ಠಾಣೆ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿವಶಪಡಿಸಿಕೊಂಡ 190.7ಕೆ.ಜಿ. ಗಾಂಜಾವನ್ನು ಹಾಸನಕೈಗಾರಿಕಾ ಪ್ರದೇಶದಲ್ಲಿರುವ ಜಿಲ್ಲಾ ಮಾದಕ ವಸ್ತುವಿಲೇವಾರಿ ಸಮಿತಿ ಸಮ್ಮುಖದಲ್ಲಿ ನಾಶ ಪಡಿಸಲಾಗಿದೆಎಂದು ತಿಳಿಸಿದ್ದಾರೆ.

Advertisement

ಮಾದಕ ವಸ್ತು ವಿರೋ ಧಿ ದಿನಾಚರಣೆಯನ್ನು ಒಂದುದಿನಕ್ಕೆ ಸೀಮಿತಗೊಳಿಸದೆ ಗೃಹ ಸಚಿವರ ಮಾರ್ಗದರ್ಶನದಲ್ಲಿಜಾಗೃತಿ ವಾಹನಕ್ಕೆ ಚಾಲನೆ ನೀಡಲಾಗಿದೆ. ಮಾದಕ ವಸ್ತುಗಳಸೇವನೆಯಿಂದ ಮನುಷ್ಯನ ಮಾನಸಿಕತೆ ಮೇಲೆ ಬೀರುವಪರಿಣಾಮ, ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಕಾನೂನು ಕ್ರಮದಮಾಹಿತಿಯನ್ನು ಒಳಗೊಂಡಿದೆ ಎಂದು ತಿಳಿಸಿದರು.ಜಾಗೃತಿ ವಾಹನ ರಾಜ್ಯಾದ್ಯಂತ ಸಂಚರಿಸುತ್ತಿದ್ದು ಈಗಾಗಲೇ 4ಸಾವಿರಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆಅರಿವು ಮೂಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನುಸೀಜ್‌ ಮಾಡಲಾಗುತ್ತಿದೆ. ಸೀಮ್‌ ಮಾಡಿರುವಮಾದಕ ವಸ್ತುಗಳನ್ನು ಹಾಸನ ಇಂಡಸ್ಟ್ರಿಯಲ್‌ಏರಿಯಾದಲ್ಲಿ 190 ಗಾಂಜಾ ನಾಶಪಡಿಸಲಾಗಿದೆಎಂದರು.ಜಿಲ್ಲೆಯಲ್ಲಿ ಇದುವರೆಗೂ ಅನುಮಾಸ್ಪದವಾದ250 ಮಂದಿಯನ್ನು ಪರೀಕ್ಷೆಗೆ ಒಳಡಪಡಿಸಲಾಗಿದೆ.74 ಜನರು ಮಾದಕ ವಸ್ತು ಸೇವನೆ ಮಾಡಿರುವುದುಗಮನಕ್ಕೆ ಬಂದಿದೆ. ಶನಿವಾರ ಮತ್ತು ಭಾನುವಾರ ಎರಡುದಿನಗಳಲ್ಲಿ 74 ಗಾಂಜಾ ಪ್ರಕರಣಗಳನ್ನು ದಾಖಲು ಮಾಡಲಾಗಿದೆಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಯುವಕರು ಗಾಂಜಾ ಸೇವನೆಮತ್ತು ಮಾದಕ ವಸ್ತುಗಳ ಸೇವನೆ ಮಾಡುತ್ತಿರುವುದುಕಂಡು ಬಂದಲ್ಲಿ 112ಗೆ ಕರೆ ಮಾಡಿ ಹಾಗೂ ಪೊಲೀಸ್‌ ಇಲಾಖೆಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮಾಹಿತಿ ನೀಡುವಂತೆ ಮನವಿಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next