Advertisement

ಕಾಲೇಜು ಸೀಟು ಹಂಚಿಕೆಯಲ್ಲಿ ತಾರತಮ್ಯ-ಆರೋಪ

06:22 PM Jun 08, 2022 | Team Udayavani |

ಚಿಕ್ಕಮಗಳೂರು: ಸರ್ಕಾರಿಜ್ಯೂನಿಯರ್‌ ಕಾಲೇಜಿನಲ್ಲಿಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ಸೀಟುಹಂಚಿಕೆಯಲ್ಲಿ ತಾರತಮ್ಯ ಧೋರಣೆಅನುಸರಿಸಲಾಗುತ್ತಿದೆ ಎಂದುಆರೋಪಿಸಿ ದಲಿತ ಸಂಘರ್ಷ ಸಮಿತಿಮಹಾ ಒಕ್ಕೂಟ ವತಿಯಿಂದ ಪಪೂಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆಮನವಿ ಸಲ್ಲಿಸಿದರು.

Advertisement

ಮಂಗಳವಾರ ಪಪೂ ಶಿಕ್ಷಣ ಇಲಾಖೆಉಪ ನಿರ್ದೇಶಕ ಪುಟ್ಟನಾಯಕ್‌ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದಮುಖಂಡರು, ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆಸೀಟು ಹಂಚಿಕೆಯಲ್ಲಿ ತಾರತಮ್ಯಧೋರಣೆ ಅನುಸರಿಸುತ್ತಿರುವರವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದುಒತ್ತಾಯಿಸಿದರು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವಿದ್ಯಾರ್ಥಿಗಳು ಕಾಲೇಜುಸೇರಲು ಮುಂದಾದರೇಇಲ್ಲಸಲ್ಲದಕಾರಣಗಳನ್ನು ನೀಡಲಾಗುತ್ತಿದೆ.

ವಾಣಿಜ್ಯ ವಿಭಾಗಕ್ಕೆ ಸೇರಲುಮುಂದಾದರೆ ಬೋಧಕರು ಇಲ್ಲ ಎಂದುಸಬೂಬು ಹೇಳಿ ವಿದ್ಯಾರ್ಥಿಗಳನ್ನುಕಳಿಸಲಾಗುತ್ತಿದೆ ಎಂದು ದೂರಿದರು.ಕಲಾ ವಿಭಾಗಕ್ಕೆ ದಾಖಲಾಗಲುಮುಂದಾದರೆ ಶೇಕಡಾವಾರುಅಂಕವಿಲ್ಲ, ಈಗಾಗಲೇಭರ್ತಿಯಾಗಿದೆ ಎಂದು ತಾರತಮ್ಯನೀತಿ ಅನುಸರಿಸುತ್ತಿದ್ದು ಅಂತವರವಿರುದ್ಧ ಕ್ರಮ ಕೈಗೊಳ್ಳಬೇಕು.ಅರ್ಹ ವಿದ್ಯಾರ್ಥಿಗಳ ದಾಖಲಾತಿಗೆಮುಂದಾಗದಿದ್ದರೆ ಒಕ್ಕೂಟದಿಂದಜಿಲ್ಲಾದ್ಯಂತ ಹೋರಾಟಕೈಗೊಳ್ಳುವುದಾಗಿ ಎಚ್ಚರಿಸಿದರು.

ಒಕ್ಕೂಟದ ಜಿಲ್ಲಾ ಸಂಚಾಲಕಯಲಗುಡಿಗೆ ಹೊನ್ನಪ್ಪ, ಕಬ್ಬಿಗೆರೆಮೋಹನ್‌, ಆದರವಳ್ಳಿ ಮೋಹನ್‌,ಮುಖಂಡರಾದ ಎ.ಯು. ಪ್ರಕಾಶ್‌,ರಜನಿಕಾಂತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next