Advertisement

ದೇವರ ದರ್ಶನದಿಂದ ಭಕ್ತಿಯ ಪ್ರೇರಣೆ

08:03 PM Apr 20, 2022 | Team Udayavani |

ಚಿಕ್ಕಮಗಳೂರು: ಶ್ರೀ ಕ್ಷೇತ್ರಕ್ಕೆ ಬಂದು ದೇವರದರ್ಶನ ಪಡೆದ ನನಗೆ ಅತ್ಯಂತ ಭಕ್ತಿಯ ಭಾವಅನುಭವವಾಗಿದೆ ಎಂದು ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹೇಳಿದರು.ಮಂಗಳವಾರ ಕೊಪ್ಪ ತಾಲೂಕು ಹರಿಹರಪುರಶ್ರೀಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳನೇತೃತ್ವದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭಾಭಿಷೇಕದಲ್ಲಿ ಪಾಲ್ಗೊಂಡು ಅವರುಮಾತನಾಡಿದರು.

Advertisement

ಶ್ರೀ ಲಕ್ಷಿ ¾à ನರಸಿಂಹ ಸ್ವಾಮಿ, ಶಾರದಾಂಬೆದರ್ಶನ ಪಡೆದು ನನ್ನಲ್ಲಿ ಒಂದು ರೀತಿ ವಿದ್ಯುತ್‌ಸಂಚಲನವಾದಂತೆ ಅನುಭವವಾಗಿದೆ. ಒಂದುರೀತಿಯ ಭಕ್ತಿಯ ಪ್ರೇರಣೆ ಪಡೆದುಕೊಂಡಿದ್ದೇನೆಎಂದು ಅಭಿಪ್ರಾಯಿಸಿದರು.ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ.ದೇವರಿಗೆ ಕಂಡೀಶನ್‌ ಹಾಕಿ ಪ್ರಾರ್ಥಿಸುವುದುಪ್ರಾರ್ಥನೆಯಾಗುವುದಿಲ್ಲ, ಹನುಮಾನ್‌ಚಾಲೀಸಾದಲ್ಲಿ ಉಲ್ಲೇಖೀಸಿದಂತೆ ಇಚ್ಛೆ ಪಡದಿದ್ದರೂದೇವರ ಆಶೀರ್ವಾದ ಕಡಿಮೆಯಾಗುವುದಿಲ್ಲ,ದೇವರಿಗೆ ಎಲ್ಲವೂ ಗೊತ್ತು ಎಂದರು.

ನಾವು ಭೂಮಿಯ ಮೇಲೆ ಬಂದ ನಂತರಸುಖ ದುಃಖ, ನೆಮ್ಮದಿ, ಜೀವನ ಸಾರ್ಥಕತೆಗೆದೈವದಲ್ಲಿ ಮತ್ತು ಗುರುವಿನಲ್ಲಿ ಭಕ್ತಿ ಬಹಳಮುಖ್ಯ. ಅಭಿವ್ಯಕ್ತ ಭಕ್ತಿಯಿಂದ ದೇವರು ಕರಗಿನೀರಾಗುತ್ತಾನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next