Advertisement

ಕರಾವಳಿ ಆಯಿತು ಇದೀಗ ಮಲೆನಾಡಿನಲ್ಲೂ ಮುಸ್ಲಿಂ ವ್ಯಾಪಾರಿಗಳ ನಿರ್ಬಂಧಕ್ಕೆ ಒತ್ತಾಯ

03:27 PM Mar 23, 2022 | Team Udayavani |

ಚಿಕ್ಕಮಗಳೂರು: ಕರಾವಳಿಯಲ್ಲಿ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ನಿಷೇಧಕ್ಕೆ ಒತ್ತಾಯ ಕೇಳಿ ಬಂದ ಬೆನ್ನಲ್ಲೇ ಇತ್ತ ಮಲೆನಾಡಲ್ಲೂ ಅದೇ ಕೂಗು ಕೇಳಿ ಬಂದಿದೆ.

Advertisement

ಶೃಂಗೇರಿ ತಾಲೂಕಿನ  ಚಿತ್ರವಳ್ಳಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ  ನಿಷೇಧಿಸಿಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಅಡ್ಡಗದ್ದೆ ಗ್ರಾಮದ ವನ ದುರ್ಗಾಪರಮೇಶ್ವರಿ ಜಾತ್ರೆಗೆ ಅನ್ಯ ಧರ್ಮಿಯರಿಗೆ ಅಂಗಡಿ, ಮಳಿಗೆ ತೆರೆಯಲು ಅವಕಾಶ ನೀಡದಂತೆ  ಅಡ್ಡಗದ್ದೆ ಗ್ರಾಮ ಪಂಚಾಯಿತಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಕ್ರಮಕೈಗೊಳ್ಳಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕರಾವಳಿಯಲ್ಲಿ ಕಳೆದೆರೆಡು ದಿನಗಳಿಂದ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವ ಬಗ್ಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಿದ್ದು, ಇದೀಗ  ಮಲೆನಾಡು ಭಾಗಕ್ಕೂ ವಿವಾದ ಹಬ್ಬಿದೆ.

Advertisement

Udayavani is now on Telegram. Click here to join our channel and stay updated with the latest news.

Next