ಶೃಂಗೇರಿ: ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆಸಲ್ಲಿಸುವವರನ್ನು ಜನ ಗುರುತಿಸುವುದಿಲ್ಲ ಎಂದುಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಪಟ್ಟಣದ ವಿದ್ಯಾನಗರದ ಆದಿಚುಂಚನಗಿರಿಸಮುದಾಯಭವನದಲ್ಲಿ ಶುಕ್ರವಾರ ಜಾತ್ಯತೀತಜನತಾದಳದ ಕ್ಷೇತ್ರ ಮಟ್ಟದ ಕಾರ್ಯಕರ್ತರಸಭೆಯಲ್ಲಿ ಅವರು ಮಾತನಾಡಿದರು.ನಾನು ಕೇವಲ 14 ತಿಂಗಳು ಇಂಧನಸಚಿವನಾಗಿದ್ದಾಗ ರಾಜ್ಯದಲ್ಲಿ 600 ವಿದ್ಯುತ್ ವಿತರಕಕೇಂದ್ರ ಸ್ಥಾಪಿಸಲಾಗಿತ್ತು.
ಆಗ ದಿನಕ್ಕೊಂದರಂತೆ ಹೊಸವಿದ್ಯುತ್ ವಿತರಣಾ ಕೇಂದ್ರ ಆರಂಭಿಸಲಾಗಿತ್ತು.ಒಂದು ವಿದ್ಯುತ್ ವಿತರಕ ಕೇಂದ್ರ ಆರಂಭಿಸಲುಮೂರು ಕೋಟಿ ಖರ್ಚಾಗುತ್ತಿದ್ದರೆ, ಅದು ಈಗ10 ಕೋಟಿಗೆ ಏರಿಕೆಯಾಗಿದೆ. ಬಿಜೆಪಿ ಸರಕಾರದಅವ ಧಿಯಲ್ಲಿ ಕೇವಲ 20 ಹೊಸ ಸ್ಟೇಷನ್‌ಆರಂಭಿಸಲಾಗಿದೆ. ವಿದ್ಯುತ್ ದರ ಏರಿಕೆ ಮಾಡಲುಅವಕಾಶ ನೀಡಿರಲಿಲ್ಲ. ಕಳೆದ ಹತ್ತು ವರ್ಷದಲ್ಲಿ ಆಗಾಗಏರಿಕೆ ಮಾಡಿ, ಜನ ಸಾಮಾನ್ಯರಿಗೆ ಆರ್ಥಿಕ ಹೊರೆಹೊರಿಸುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಸುಳ್ಳುಹೇಳುತ್ತಿದ್ದು, ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತಿಲ್ಲ.
ಶೃಂಗೇರಿ ಸುತ್ತಮುತ್ತ ನಾನು ಸಚಿವನಾಗಿದ್ದ ಅವಧಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಅನುದಾನಒದಗಿಸಿದ್ದು, ಇದರಿಂದ ವಿದ್ಯಾರಣ್ಯಪುರ ಸೇರಿದಂತೆಪಟ್ಟಣಕ್ಕೆ ಸಮೀಪದ ಅನೇಕ ರಸ್ತೆ ಅಭಿವೃದ್ಧಿ ಕಾಣಲುಸಾಧ್ಯವಾಯಿತು ಎಂದರು.ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡಮಾತನಾಡಿ, ಮತ್ತೂಮ್ಮೆ ರೈತರ ಪಕ್ಷ ಅಧಿ ಕಾರಕ್ಕೆತರುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೃಷಿಕ್ಷೇತ್ರಕ್ಕೆ ನಾನು ಪ್ರಧಾನಿಯಾದ ಅಲ್ಪಾವ ಧಿಯಲ್ಲಿನೀಡಿದ ಕೊಡುಗೆ ಯಾವ ಪ್ರಧಾನಿಯಿಂದಲೂಸಾಧ್ಯವಾಗಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಲು ರಾಜ್ಯದಲ್ಲಿನಿರಂತರ ಪ್ರವಾಸ ಕೈಗೊಳ್ಳುತ್ತೇನೆ.
ರಾಷ್ಟ್ರೀಯಪಕ್ಷಗಳು ಸಮುದಾಯಗಳ ನಡುವೆ ಅಶಾಂತಿಹುಟ್ಟುಹಾಕಿ ರಾಜಕೀಯ ಲಾಭ ಪಡೆಯುತ್ತಿವೆ.ಈದ್ಗಾ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿ,ಶಾಶ್ವತ ಪರಿಹಾರ ಕಂಡುಕೊಳ್ಳಲಾಯಿತು ಎಂದರು.ರಾಜ್ಯ ಜಾತ್ಯತೀತ ಜನತಾದಳ ಉಪಾಧ್ಯಕ್ಷಸುಧಾಕರ ಶೆಟ್ಟಿ ಮಾತನಾಡಿ, ಮಲೆನಾಡಿನ ಭಾಗಕ್ಕೆಜಿಲ್ಲಾ ಕೇಂದ್ರ 100 ಕಿಮೀ ದೂರದಲ್ಲಿದೆ. ಕೊಪ್ಪಕೇಂದ್ರವಾಗಿಸಿ, ಜಿಲ್ಲೆಯನ್ನು ರಚನೆ ಮಾಡಲುಹೋರಾಟ ನಡೆಸಬೇಕಿದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಜೆಡಿಎಸ್‌ಅಧ್ಯಕ್ಷ ದಿವಾಕರ ಭಟ್ ವಹಿಸಿದ್ದರು. ಜೆಡಿಎಸ್‌ಮುಖಂಡರಾದ ಟಿ.ಟಿ. ಕಳಸಪ್ಪ, ಎಚ್.ಜಿ.ವೆಂಕಟೇಶ್, ಎಚ್.ಟಿ. ರಾಜೇಂದ್ರ, ರಂಜನ್ ಅಜಿತ್‌ಕುಮಾರ್, ಚಂದ್ರಶೇಖರ್, ಎ.ಎನ್. ರಾಮಸ್ವಾಮಿ,ನಂದಿನಿ, ದಿನೇಶ್ ಹೆಗ್ಡೆ, ವಿವೇಕಾನಂದ ಮತ್ತಿತರರುಇದ್ದರು.