Advertisement

ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಲಿ

02:26 PM Sep 28, 2021 | Team Udayavani |

ಚಿಕ್ಕಮಗಳೂರು: ಸರ್ಕಾರದ ಯೋಜನೆಗಳನ್ನುಅರ್ಹ ಫಲಾನುಭವಿಗಳನ್ನು ಗುರುತಿಸಿನೀಡಬೇಕು ಎಂದು ಚಿಕ್ಕಮಗಳೂರು ತಾಪಂಆಡಳಿತಾಧಿ ಕಾರಿ ಹಾಗೂ ಜಿಪಂ ಉಪಕಾರ್ಯದರ್ಶಿ ವಿ. ನಾಗರಾಜ್‌ ತಿಳಿಸಿದರು.

Advertisement

ಸೋಮವಾರ ನಗರದ ತಾಪಂನಲ್ಲಿ ನಡೆದಸಾಮಾನ್ಯ ಸಭೆಯ ಅಧ್ಯ ಕ್ಷತೆ ವಹಿಸಿ ಅವರುಮಾತನಾಡಿದರು.2021-22ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ ಆರೋಗ್ಯ, ಶಿಕ್ಷಣ,ಕುಡಿಯುವ ನೀರು ಸೇರಿದಂತೆ ಇತರೆ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ತಿಳಿಸಿದ ಅವರು, ತಾಪಂನಿಂದ ಬಿಡುಗಡೆಯಾಗುವಅನುದಾನದಲ್ಲಿ ಸರ್ಕಾರ ನಿಗ ದಿ ಮಾಡಿರುವಪರಿಶಿಷ್ಟ ಜಾತಿಗೆ ಶೇ.5ರಷ್ಟು ಮೀಸಲಿಡಬೇಕು ಎಂದರು.

ತಾಲೂಕಿನಲ್ಲಿರುವ ಅಂಗನವಾಡಿಕಟ್ಟಡ, ಶಾಲಾ ದುರಸ್ತಿ, ಆರೋಗ್ಯಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಅಲ್ಲದೆ ರಸ್ತೆಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆಕ್ರಿಯಾ ಯೋಜನೆಯಲ್ಲಿ ಮೀಸಲಿಟ್ಟಿರುವಹಣವನ್ನು ಅದೇ ಯೋಜನೆಗೆ ಖರ್ಚುಮಾಡಬೇಕೆಂದು ತಿಳಿಸಿದರು.

ಮೀಸಲಿಟ್ಟ ಯೋಜನೆಯ ಕಾಮಗಾರಿಗಳು ಯಾವುದೇ ಕಾರಣಕ್ಕೂ ಬದಲಾವಣೆಗೆಅವಕಾಶವಿಲ್ಲದಂತೆ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳು ಗಮನ ಹರಿಸಬೇಕು.ತಾಲೂಕು ಮಟ್ಟದ ವಿವಿಧ ಇಲಾಖೆಗಳು ತಮ್ಮಕಚೇರಿಗಳಲ್ಲಿ ಸಾಮಾಜಿಕ ನ್ಯಾಯ ಸಿಗುವಹಾಗೂ ಗ್ರಾಮಗಳನ್ನು ಅಭಿವೃದ್ಧಿಗೊಳಿಸಲುಅಧಿ ಕಾರಿಗಳು ಮುಂದಾಗಬೇಕು ಹಾಗೂಎಲ್ಲಾ ಯೋಜನೆಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಎಚ್‌.ಕೆ. ತಾರಾನಾಥ್‌, ಲೆಕ್ಕಾ ಧಿಕಾರಿಸುರೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next