ಕಡೂರು: ವಿಧಾನ ಪರಿಷತ್‌ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಎಂ.ಕೆ. ಪ್ರಾಣೇಶ್ ಅತ್ಯ ಧಿಕ ಮತಗಳಿಂದಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷಹಾಗೂ ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.ಪಟ್ಟಣದ ಸುರಚಿ ಸಭಾಂಗಣದಲ್ಲಿಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಡೂರು ವಿಧಾನಸಭಾ ಕ್ಷೇತ್ರದವ್ಯಾಪ್ತಿಯಲ್ಲಿ ಗ್ರಾಪಂ ಮತಗಳು 477ಇದ್ದು ತಮ್ಮದು ಒಂದು ಮತ ಸೇರಿ ಒಟ್ಟುಕ್ಷೇತ್ರದಲ್ಲಿ 524 ಮತಗಳಿದ್ದು ಇವುಗಳಲ್ಲಿ ಕನಿಷ್ಟ 350 ಮತಗಳನ್ನು ನಮ್ಮಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರಿಗೆನೀಡಿ ಗೆಲ್ಲಿಸಲಿದ್ದೇವೆ ಎಂಬ ವಿಶ್ವಾಸವ್ಯಕ್ತಪಡಿಸಿದರು.ಗ್ರಾಪಂ ಮತ್ತು ಪುರಸಭೆಯ ಸದಸ್ಯರನ್ನುಯಾವುದೇ ತಾರತಮ್ಯವಿಲ್ಲದೆ, ಜಾತಿಬೇಧವಿಲ್ಲದೆ ಎಲ್ಲರನ್ನೂ ಗೌರವಯುತವಾಗಿನಾನು ಕಂಡಿದ್ದೇನೆ. ಎರಡು ಪುರಸಭೆಸೇರಿದಂತೆ 49 ಗ್ರಾಪಂಗಳಲ್ಲಿ ಯಾವುದೇರೀತಿ ಹಸ್ತಕ್ಷೇಪ ಮಾಡದೆ ಪಕ್ಷಾತೀತವಾಗಿಅಭಿವೃದ್ಧಿಯ ಕಡೆ ಮಾತ್ರ ಗಮನ ನೀಡಿದ್ದೇನೆ.
ಸದಸ್ಯರು ಯಾವ ಪಕ್ಷದವರುಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಅವರಅಭಿವೃದ್ಧಿಪರ ಕೆಲಸಗಳನ್ನು ಬೆಂಬಲಿಸಿದ್ದೇನೆ.ಈ ಎಲ್ಲ ಅಂಶಗಳು ಸಹ ಪ್ರಾಣೇಶ್ ಅವರಿಗೆಮತ ದೊರಕಿಸಿಕೊಡಲು ಪೂರಕವಾಗಿವೆ.ಅವರೆಲ್ಲರೂ ಆತ್ಮಸಾಕ್ಷಿಯಾಗಿ ಮತಚಲಾಯಿಸಲಿದ್ದಾರೆ ಎಂದರು.
ಕೋಮುವಾದಿ ಪಕ್ಷ ಅ ಧಿಕಾರಕ್ಕೆಬರುವುದನ್ನು ತಡೆಯಲು ಕಾಂಗ್ರೆಸ್‌ಅಭ್ಯರ್ಥಿಗೆ ಬೆಂಬಲಿಸುವ ವೈ.ಎಸ್.ವಿ.ದತ್ತ ನಿರ್ಧಾರದ ಬಗ್ಗೆ ಪತ್ರಕರ್ತರುಪ್ರಶ್ನಿಸಿದಾಗ ಉತ್ತರಿಸಿದ ಬೆಳ್ಳಿಪ್ರಕಾಶ್‌ಅದು ಅವರ ಆಂತರಿಕ ವಿಚಾರ. ಆದರೆಕಡೂರು ಪುರಸಭೆಯಲ್ಲಿ ಬಿಜೆಪಿ ಜೊತೆಮೈತ್ರಿ ಮಾಡಿಕೊಂಡಿಲ್ಲವೇ? ಬಿಜೆಪಿಬೆಂಬಲದಿಂದಲೇ ಜೆಡಿಎಸ್ ಅಧ್ಯಕ್ಷಸ್ಥಾನ ಪಡೆದಿಲ್ಲವೇ? ಆದರೂ ಎಂದಿಗೂಪುರಸಭೆಯ ಆಡಳಿತದಲ್ಲಿ ಯಾವ ಹಸ್ತಕ್ಷೇಪಮಾಡದೆ ತಮಗೆ ಬಂದ ಅನುದಾನಗಳನ್ನುಎಲ್ಲ ವಾರ್ಡುಗಳಿಗೂ ಸಮನಾಗಿಪ್ರಾಧಾನ್ಯತೆ ನೀಡಿ ಹಂಚಿಕೆ ಮಾಡಲಾಗಿದೆ.
ಯಾರಿಗೆ ಬೇಕಾದರೂ ಬೆಂಬಲನೀಡುವುದಕ್ಕೆ ಅವರು ಸರ್ವ ಸ್ವತಂತ್ರರು.ಆದರೆ ಕೋಮುವಾದಿ ಪಕ್ಷ ಎಂದುವ್ಯಾಖ್ಯಾನ ಮಾಡುವಾಗ ಹಲವು ಪ್ರಶ್ನೆಗಳುಉದ್ಭವಿಸುತ್ತವೆ. ಕಾರಣ ಏನೇ ಇರಲಿ.ಪುರಸಭೆಯಲ್ಲಿ ಮೈತ್ರಿ ಮಾಡಿಕೊಳ್ಳುವಾಗಕಾಣದ ಕೋಮುವಾದ ಈಗ ಯಾಕೆ ದತ್ತಅವರಿಗೆ ಕಾಣುತ್ತದೆ ? ಬಿಜೆಪಿ ಪಕ್ಷಕ್ಕೆ ಹೆಚ್ಚಿನಮತಗಳು ದೊರೆಯುತ್ತವೆ. ದತ್ತ ಅವರುಬೇರೆ ಪಕ್ಷದಲ್ಲಿದ್ದರೂ ಸಹ ನಮ್ಮ ನಾಯಕರುಅವರ ಮಾತುಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಕಡೂರು ಪುರಸಭೆಯ ಅಧ್ಯಕ್ಷರಿಗೆತಾವು ಯಾವುದೇ ತಾಕೀತು ಮಾಡಿಲ್ಲ.ಅವರಿಗೆ ಸಂಪೂರ್ಣ ಅಧಿ ಕಾರ ನೀಡಿದ್ದೇನೆ.ಕ್ಷೇತ್ರದಲ್ಲಿ ಅನೇಕ ಗ್ರಾಪಂಗಳಲ್ಲಿ ಜೆಡಿಎಸ್‌ಬೆಂಬಲಿಗರೊಂದಿಗೆ ಮೈತ್ರಿಯಾಗಿಲ್ಲವೇಎಂದು ಅನೇಕ ಉದಾಹರಣೆಗಳನ್ನುನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿಮುಖಂಡರಾದ ಕೆ.ಆರ್. ಮಹೇಶ್‌ಒಡೆಯರ್, ಜಿಗಣೇಹಳ್ಳಿ ನೀಲಕಂಠಪ್ಪ,ಸೀಗೇಹಡ್ಲು ಹರೀಶ್, ಕುಮಾರ್ ನಾಯ್ಕ,ಸಿದ್ದಪ್ಪ ಇದ್ದರು.