Advertisement

ಶುರುವಾಯ್ತು ಕೈ-ಕಮಲ ಜಿದ್ದಾ ಜಿದ್ದಿ

01:49 PM Dec 06, 2021 | Team Udayavani |

ಚಿಕ್ಕಮಗಳೂರು: ವಿಧಾನ ಪರಿಷತ್‌ ಚುನಾವಣೆಗೆದಿನಗಣನೆ ಆರಂಭವಾಗಿದೆ. ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ನಡುವೆ ನೇರಾ ನೇರ ಪೈಪೋಟಿಶುರುವಾಗಿದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು, ಎರಡೂ ಪಕ್ಷಗಳ ಕಾರ್ಯಕರ್ತರುಶತ ಪ್ರಯತ್ನ ನಡೆಸುತ್ತಿದ್ದಾರೆ.

Advertisement

ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿ ಧಿಸುವ 1 ಪರಿಷತ್‌ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ನಿಂದಗಾಯತ್ರಿ ಶಾಂತೇಗೌಡ, ಬಿಜೆಪಿಯ ಎಂ.ಕೆ.ಪ್ರಾಣೇಶ್‌,ಆಮ್‌ ಆದ್ಮಿ ಪಕ್ಷದ ಡಾ| ಸುಂದರಗೌಡ, ಪಕ್ಷೇತರಅಭ್ಯರ್ಥಿಗಳಾಗಿ ಬಿ.ಟಿ. ಚಂದ್ರಶೇಖರ್‌,ಜೆ.ಐ. ರೇಣುಕುಮಾರ್‌ ಕಣದಲ್ಲಿದ್ದು, ಕಾಂಗ್ರೆಸ್‌ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಎದುರಾಗಿದೆ.

ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವಎರಡೂ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ತಮ್ಮಕಡೆ ಸೆಳೆದುಕೊಳ್ಳಲು ಭಾರೀ ಪ್ರಯತ್ನ ನಡೆಸುತ್ತಿದ್ದಾರೆ.ಕಾಂಗ್ರೆಸ್‌ ಅಭ್ಯರ್ಥಿಯ ಪರ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಸೇರಿದಂತೆ ಅನೇಕರು ಗ್ರಾಮ ಸ್ವರಾಜ್‌ಕಾರ್ಯಕ್ರಮದ ಮೂಲಕ ಮತಯಾಚಿಸುವ ಮೂಲಕ ಅಭ್ಯರ್ಥಿ ಬೆನ್ನಿಗೆನಿಂತಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್‌ ಪರ ಮಾಜಿಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಕಡೂರು, ತರೀಕೆರೆ ತಾಲೂಕು ಮತಯಾಚಿಸಿದ್ದು, ಇತ್ತೀಚೆಗೆ ಚಿಕ್ಕಮಗಳೂರುನಗರದಲ್ಲಿ ಜನಸ್ವರಾಜ್‌ ಯಾತ್ರೆಯ ಮೂಲಕಸಚಿವ ಕೆ.ಎಸ್‌. ಈಶ್ವರಪ್ಪ, ಆರ್‌. ಅಶೋಕ್‌ಮತ ಯಾಚಿಸುವ ಮೂಲಕ ಅಭ್ಯರ್ಥಿಯಬೆನ್ನಿಗೆ ನಿಂತಿದ್ದಾರೆ.ಚುನಾವಣೆಗೆ 5 ದಿನ ಮಾತ್ರ ಬಾಕಿ ಇದ್ದು ಕಾಫಿ ನಾಡಿನಲ್ಲಿ ಚುನಾವಣೆ ಅಖಾಡ ದಿನದಿಂದ ದಿನಕ್ಕೆರಂಗೇರುತ್ತಿದೆ. ಕಾಂಗ್ರೆಸ್‌- ಬಿಜೆಪಿ ಮುಖಂಡರ ನಡುವೆವಾಕ್ಸಮರವೂ ಜೋರಾಗಿಯೇ ನಡೆಯುತ್ತಿದೆ.

ಮತದಾರನಮನಸ್ಸು ಗೆಲ್ಲುವ ಪ್ರಯತ್ನವೂ ಭರ್ಜರಿಯಾಗಿಯೇನಡೆಯುತ್ತಿದೆ. ಆದರೆ, ಮತದಾರನ ಚಿತ್ತ ಯಾವ ಅಭ್ಯರ್ಥಿಯಕಡೆ ಎನ್ನುವುದು ಇನ್ನೂ ಯಕ್ಷ ಪ್ರಶ್ನೆಯಂತಿದೆ.ಕಾಂಗ್ರೆಸ್‌ ಅಭ್ಯರ್ಥಿಯ ಬೆನ್ನಿಗೆ ನಿಂತಜೆಡಿಎಸ್‌: ಪರಿಷತ್‌ ಚುನಾವಣೆಯಲ್ಲಿಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಹಾಗೂಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ನಿಲುವನ್ನುಇನ್ನೂ ಸ್ಪಷ್ಟಪಡಿಸಿಲ್ಲ.

Advertisement

ಆದರೆ, ಕಡೂರು ಮಾಜಿಶಾಸಕ ವೈ.ಎಸ್‌.ವಿ. ದತ್ತ, ಕಾಂಗ್ರೆಸ್‌ ಅಭ್ಯರ್ಥಿಗೆಬೆಂಬಲ ಸೂಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರಾಗಿದ್ದ ಎಚ್‌.ಎಚ್‌.ದೇವರಾಜ್‌, ಈ ಹಿಂದೆ ವಿಧಾನಸಭೆ ಚುನಾವಣೆಅಭ್ಯರ್ಥಿಯಾಗಿದ್ದ ಬಿ.ಎಚ್‌. ಹರೀಶ್‌, ಹಾಗೂ ಗೋಪಿಕೃಷ್ಣಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್‌ಗೆ ಈಚುನಾವಣೆಯಲ್ಲಿ ಮತ್ತಷ್ಟು ಬಲ ತಂದುಕೊಟ್ಟಿದೆ. ಹಾಗೆಯೇಸಿಪಿಐ ಬೆಂಬಲ ಸೂಚಿಸಿರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ಇನ್ನಷ್ಟು ಗಟ್ಟಿಗೊಂಡಿದೆ.

ಈ ಚುನಾವಣೆಯಲ್ಲಿ ನಿರ್ಣಾಯಕವಾಗಿರುವಜೆಡಿಎಸ್‌ ಬೆಂಬಲಿತ ಸ್ಥಳೀಯ ಸಂಸ್ಥೆಗಳಸದಸ್ಯರನ್ನು ತಮ್ಮತ್ತ ಸೆಳೆಯಲು ಬಿಜೆಪಿಶತಪ್ರಯತ್ನ ನಡೆಸುತ್ತಿದೆ. ಬಿಜೆಪಿಗೆ ಬೆಂಬಲಸೂಚಿಸುವಂತೆ ಬಿಜೆಪಿ ಮುಖಂಡರುಜೆಡಿಎಸ್‌ ವರಿಷ್ಠರನ್ನು ಕೋರಿದ್ದಾರೆ.ಜಿಲ್ಲೆಯ ಬಿಜೆಪಿ ಮುಖಂಡರು ಜೆಡಿಎಸ್‌ಬೆಂಬಲಿತ ಸ್ಥಳೀಯ ಸಂಸ್ಥೆ ಸದಸ್ಯರು ತಮ್ಮನ್ನುಬೆಂಬಲಿಸುವಂತೆ ಪತ್ರ ವ್ಯವಹಾರ ನಡೆಸಿದ್ದಾರೆ.

ಜೆಡಿಎಸ್‌ ಬೆಂಬಲಿತ ಸದಸ್ಯರು ಯಾರಿಗೆ ಬೆಂಬಲನೀಡಲಿದ್ದಾರೆಂಬುದನ್ನು ನೋಡಬೇಕಿದೆ. ಪರಿಷತ್‌ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್‌ ಬಿಜೆಪಿಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿ¨

Advertisement

Udayavani is now on Telegram. Click here to join our channel and stay updated with the latest news.

Next