Advertisement

ಕಾಫಿ ನಾಡಲ್ಲಿ ರಂಗೇರುತ್ತಿದೆ ಚುನಾವಣೆ ಕಣ

07:17 PM Nov 25, 2021 | Team Udayavani |

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿಪರಿಷತ್‌ ಚುನಾವಣೆ ಕಣ ದಿನದಿಂದದಿನಕ್ಕೆ ರಂಗೇರುತ್ತಿದೆ. ಈಗಾಗಲೇನಾಮಪತ್ರ ಸಲ್ಲಿಕೆ ಕಾರ್ಯಮುಗಿದಿದ್ದು, ಅಭ್ಯರ್ಥಿಗಳುಮತಬೇಟೆಯಲ್ಲಿ ಮಗ್ನರಾಗಿದ್ದಾರೆ.ಜಿಲ್ಲೆಯ ನಾಲ್ಕು ಪಟ್ಟಣಪಂಚಾಯತ್‌, ಮೂರು ಪುರಸಭೆಮತ್ತು 225 ಗ್ರಾಮ ಪಂಚಾಯಿತಿಗಳ2,425 ಜನ ಮತದಾರರಿದ್ದು, ಮತದಾರರ ಓಲೈಕೆಗೆ ಅಭ್ಯರ್ಥಿಗಳುಕಸರತ್ತು ನಡೆಸುತ್ತಿದ್ದಾರೆ.

Advertisement

ಕಾಂಗ್ರೆಸ್‌ಮತ್ತು ಬಿಜೆಪಿ ನಡುವೆ ನೇರ ಪೈಪೋಟಿಏರ್ಪಟ್ಟಿದ್ದು, ಮತದಾರರ ಓಲೈಕೆಗೆತೆರೆಮರೆಯಲ್ಲಿ ಶತಪ್ರಯತ್ನ ನಡೆದಿದೆ.ವಾಕ್‌ ಸಮರಕ್ಕೆ ಮುಂದಾದಅಭ್ಯರ್ಥಿಗಳು: ಇನ್ನೊಂದೆಡೆಅಭ್ಯರ್ಥಿಗಳ ನಡುವೆ ವಾಕ್‌ ಸಮರದಕಾವು ಸಹ ದನದಿಂದ ದಿನಕ್ಕೇ ಹೆಚ್ಚುತ್ತಿದೆ.ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್‌ಗ್ರಾಪಂಗಳಿಗೆ ಜನರೇಟರ್‌ ಕೊಟ್ಟಿದ್ದುಬಿಟ್ಟರೆ ಮತ್ತೇನೂ ಮಾಡಿಲ್ಲ ಎಂದುಕಾಂಗ್ರೆಸ್‌ ಅಭ್ಯರ್ಥಿ ದೂರಿದರೆ, ಬಿಜೆಪಿಅಭ್ಯರ್ಥಿ ಎಂ.ಕೆ. ಪ್ರಾಣೇಶ್‌, ಗಾಯತ್ರಿಶಾಂತೇಗೌಡ ಈ ಹಿಂದೇ ವಿಧಾನಪರಿಷತ್‌ ಸದಸ್ಯೆ ಆಗಿದ್ದಾಗ ಏನುಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಇದಕ್ಕೆ ಗಾಯತ್ರಿ ಶಾಂತೇಗೌಡರು,ಎಂ.ಕೆ. ಪ್ರಾಣೇಶ್‌ ಅವ ಧಿಯಲ್ಲಿ ಏನುಅಭಿವೃದ್ಧಿ ಮಾಡಿದ್ದಾರೆ ಎಂಬುದರಶ್ವೇತಪತ್ರ ಹೊರಡಿಸಲಿ. ನನ್ನ ಅವಧಿಯಲ್ಲಿ ಏನೇನು ಅಭಿವೃದ್ಧಿ ಕಾರ್ಯನಡೆಸಿದ್ದೇನೆ ಎಂದು ಶ್ವೇತಪತ್ರಹೊರಡಿಸುವುದಾಗಿ ಸವಾಲುಹಾಕಿದ್ದಾರೆ.

ಮತ್ತೂಂದು ಕಡೆ ಬಿಜೆಪಿ ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ, “ನಮ್ಮ ವಿಧಾನ ಪರಿಷತ್‌ ಸದಸ್ಯರುರೋಲ್‌ಕಾಲ್‌ ಸದಸ್ಯ ಅಲ್ಲ. ಕಾಲ್‌ರೀಸಿವ್‌ ಮಾಡುವ ಸದಸ್ಯ’ ಎಂದುಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಚುನಾವಣೆ ಕಾವು ಜಿಲ್ಲೆಯಲ್ಲಿರಂಗೇರುತ್ತಿದ್ದಂತೆ ಅಭ್ಯರ್ಥಿಗಳ ವಾಕ್‌ಸಮರವು ಬಿರುಸುಗೊಳ್ಳುತ್ತಿದೆ.ಮತದಾರ ಯಾರ ಕೈ ಹಿಡಿಯಲಿದ್ದಾನೆಎಂಬುದೇ ಕುತೂಹಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next