Advertisement

ಬಾನಳ್ಳಿಯಲ್ಲಿ ಉಣ್ಣಕ್ಕಿ ಉತ್ಸವ

10:30 AM Nov 20, 2021 | Team Udayavani |

ಕೊಟ್ಟಗೆಹಾರ: ಬಾನಳ್ಳಿಯಲ್ಲಿ ಗುರುವಾರರಾತ್ರಿ ಉಣ್ಣಕ್ಕಿ ಉತ್ಸವ ಸಂಭ್ರಮದಿಂದನಡೆಯಿತು.ಉತ್ಸವದ ಹಿನ್ನೆಲೆಯಲ್ಲಿ ತಳಿರುತೋರಣ ಹಾಗೂ ಪುಷ್ಪಾಲಂಕಾರಮಾಡಲಾಗಿತ್ತು. ಜಿಲ್ಲೆ, ಹೊರಜಿಲ್ಲೆಗಳಿಂದನೂರಾರು ಭಕ್ತಾ ದಿಗಳು ಆಗಮಿಸಿದ್ದರು.

Advertisement

ಮಹಾಮಂಗಳಾರತಿ ವೇಳೆಅಲುಗಾಡುವ ಹುತ್ತದ ವಿಸ್ಮಯವನ್ನುಕಣ್ತುಂಬಿಕೊಂಡರು.ಹಲವು ಶತಮಾನಗಳ ಹಿಂದೆನೈಸರ್ಗಿಕವಾಗಿ ಸೃಷ್ಟಿಯಾಗಿರುವ ಈ ಉಣ್ಣಕ್ಕಿ ಹುತ್ತದ ಉತ್ಸವ ಕೊರೊನಾಹಿನ್ನೆಲೆಯಲ್ಲಿ ಕಳೆದ ಎರಡುವರ್ಷಗಳಿಂದ ಸ್ಥಗಿತಗೊಂಡಿದ್ದುಸರಳವಾಗಿ ಪೂಜೆ ಸಲ್ಲಿಸಲಾಗಿತ್ತು.

ಈ ಬಾರಿ ಸಂಭ್ರಮದಿಂದ ಉತ್ಸವವನ್ನುನಡೆಸಲಾಯಿತು.ಮಣ್ಣಿನಿಂದಲೇ ನಿರ್ಮಾಣವಾದ ಈ ಹುತ್ತ 10 ಅಡಿ ಎತ್ತರವಿದ್ದು,ಮಣ್ಣಿನಿಂದಲೇ ಆವೃತವಾಗಿದೆ.ಜಾನುವಾರುಗಳಿಗೆ, ಮನುಷ್ಯರಿಗೆ ಚರ್ಮರೋಗಳು ಬಂದರೆ ಈ ಹುತ್ತದ ಮಣ್ಣು ಮೈಗೆ ಹಚ್ಚುವುದರಿಂದ ಕಾಯಿಲೆದೂರವಾಗುತ್ತದೆ ಎಂಬ ನಂಬಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next