Advertisement

ಬೆಳೆಗಾರರಿಗೆ ಅಕಾಲಿಕ ಮಳೆ ಹೊಡೆತ

06:26 PM Nov 17, 2021 | Team Udayavani |

ಚಿಕ್ಕಮಗಳೂರು: ಗಿಡಗಳಲ್ಲಿ ಫಸಲು ಮಾಗಿತೆನೆ ಬಾಗಿದೆ. ಕೊಯ್ಲು ಮಾಡಿ ಕಣದಲ್ಲಿ ರಾಶಿಮಾಡಬೇಕೆಂಬಷ್ಟರಲ್ಲಿ ಅಕಾಲಿಕ ಮಳೆ ಎಡೆಬಿಡದೆಸುರಿಯುತ್ತಿದೆ. ವರ್ಷವಿಡೀ ಬೆವರು ಹರಿಸಿ ಬೆಳೆದಬೆಳೆ ಮಣ್ಣು ಪಾಲಾಗುತ್ತದೆ.

Advertisement

ರೈತರು ದಿಕ್ಕು ಕಾಣದೆದೇವರ ಮೊರೆ ಇಡುತ್ತಿದ್ದು ಮಳೆ ಯಾವಾಗನಿಲ್ಲುತ್ತದೆ ಎಂದು ಮುಗಿಲು ನೋಡುವಂತಾಗಿದೆ.ಇದು ಮಲೆನಾಡಿನ ರೈತರ ಬೆಳೆಗಾರರ ಕಣ್ಣೀರಿನಕಥೆಯಾಗಿದೆ.ಮಲೆನಾಡಿಗೆ ಮಳೆಯೇ ಚಂದ. ಆದರೆ, ಆಮಳೆ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಮಳೆ ಬೇಕುಎಂದಾಗ ಬರಲಿಲ್ಲ, ಬೇಡ ಎಂದಾಗ ಬಿಡುತ್ತಿಲ್ಲ,ಏನಪ್ಪ ಇದು ದೇವರ ಆಟ ಎಂದು ಕಣ್ಣೆದುರುಹಾಳಾಗುತ್ತಿರುವ ಬೆಳೆಗಳನ್ನು ನೋಡಿ ರೈತರು ನಿತ್ಯಗೋಳಾಡುತ್ತಿದ್ದಾರೆ.

ಕಾಫಿ ನಾಡಿನಲ್ಲಿ ಕಳೆದ ನಾಲ್ಕೈದುವರ್ಷಗಳಿಂದ ಅತಿವೃಷ್ಟಿಯಿಂದ ರೈತರು, ಬೆಳೆಗಾರರುನಲುಗಿ ಹೋಗಿದ್ದಾರೆ. ಅತಿವೃಷ್ಟಿಗೆ ತೋಟ,ಭೂಮಿಯನ್ನೇ ಕಳೆದುಕೊಂಡಿದ್ದಾರೆ. ಅಳಿದುಳಿದತೋಟ, ಭೂಮಿಯಲ್ಲಿ ಸಾಲ ಸೋಲ ಮಾಡಿಬೆಳೆ ಬೆಳೆದಿದ್ದು, ಇನ್ನೇನು ಫಸಲು ಕೈ ಸೇರಬೇಕುಎನ್ನುವಷ್ಟರಲ್ಲಿ ಅಕಾಲಿಕ ಮಳೆ ರೈತರ ಜೀವ ಹಿಂಡಿಹಿಪ್ಪೆ ಮಾಡುತ್ತಿದೆ.ಮಲೆನಾಡು ಸೇರಿದಂತೆ ಬಯಲುಸೀಮೆ ಭಾಗದಲ್ಲಿಬೆಳೆ ಕೊಯ್ಲಿಗೆ ಬಂದು ನಿಂತಿದೆ.
ಜಿಲ್ಲೆಯಲ್ಲಿ ಅಂದಾಜು50 ಸಾವಿರ ಹೆಕ್ಟೇರ್‌ಗೂ ಅ ಧಿಕ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಆದರೆ, ಕೊಯ್ಲು ಮಾಡಲಾಗದೆಫಸಲು ಮಣ್ಣು ಪಾಲಾಗುತ್ತಿದೆ. ಅರೇಬಿಕಾ ಕಾಫಿ ಸೇರಿದಂತೆ ಕಾಫಿ ತೋಟದಲ್ಲಿ ಕಾಫಿ ಹಣ್ಣು ಹಣ್ಣಾಗಿನಿಂತಿದೆ. ಅಕಾಲಿಕ ಮಳೆಯಿಂದ ಕಾಫಿ ಕೊಯ್ಲುಮಾಡಲು ಸಾಧ್ಯವಾಗದೆ ಉದುರಿ ಕೊಳೆತುಹೋಗುತ್ತಿದೆ. ಮಳೆಯ ನಡುವೆಯೇ ಕಷ್ಟಪಟ್ಟುಕೊಯ್ಲು ಮಾಡಿದರೆ ಅದನ್ನು ಸಂಸ್ಕರಣೆ ಮಾಡಲುಸಾಧ್ಯವಾಗುತ್ತಿಲ್ಲ.

ಬಿಸಿಲು ಬೀಳದಿರುವುದರಿಂದ ಕಾಫಿ ಕಾಳು ಒಣಗಿಸಲು ಸಾಧ್ಯವಾಗುತ್ತಿಲ್ಲ, ಬೂಸ್ಟ್‌ಹಿಡಿದು ಪ್ರಯೋಜನಕ್ಕೆ ಬಾರದಂತಾಗುತ್ತಿದೆ. ಕಾಫಿ ತೋಟಗಳಲ್ಲಿ ತೇವಾಂಶ ಜಾಸ್ತಿಯಾಗಿಕಾμಗಿಡಗಳಿಗೆ ಕೊಳೆರೋಗ ಬಾಧಿಸುತ್ತಿದ್ದು,ಗಿಡಗಳನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆದೊಡ್ಡ ತಲೆನೋವಾಗಿದೆ. ಕಾμಕಾಳು ಒಣಗಿಸಲುಬಾಯ್ಲರ್‌ ವ್ಯವಸ್ಥೆ ಇಲ್ಲದೆ ಬೆಳೆಗಾರರು ಕಣ್ಣಮುಂದೇ ಹಾಳಾಗುತ್ತಿರುವ ಬೆಳೆಯನ್ನು ಕಂಡುತಮ್ಮನ್ನು ದೇವರೇ ಕಾಪಾಡಬೇಕೆಂದು ದೇವರ ಬಳಿಪರಿಪರಿಯಾಗಿ ಬೇಡಿಕೊಳ್ಳುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next