Advertisement

ಹಣದಾಸೆಗೆ ಗೋಮಾಳವನ್ನೂ ನುಂಗಿದ ಅಧಿಕಾರಿಗಳು….!: ಸ್ಥಳೀಯರ ಆರೋಪ

09:50 PM Oct 19, 2021 | Team Udayavani |

ಚಿಕ್ಕಮಗಳೂರು: ಮಲೆನಾಡಲ್ಲಿ ದನುಕರುಗಳು ಮೇಯಲು ಜಾಗವೇ ಇಲ್ಲ ಅಂದ್ರೆ ಯಾರೂ ನಂಬಲ್ಲ. ಆದರೆ, ಈಗ ಮಲೆನಾಡಲ್ಲಿ ನಿಜಕ್ಕೂ ಅಂತಹದ್ದೊಂದು ಸನ್ನಿವೇಶ ನಿರ್ಮಾಣವಾಗಿದೆ.

Advertisement

ದನಕರುಗಳ ಮೇವಿಗೆ ಜಾಗವೇ ಇಲ್ಲ. ಇದ್ದರೂ ತುಂಬಾ ವಿರಳ. ಗೋಮಾಳದಲ್ಲಿ ಸ್ವಚ್ಛಂದವಾಗಿ ಮೇಯುತ್ತಿದ್ದ ರಾಸುಗಳು ಹೊಲ-ಗದ್ದೆ, ತೋಟ, ರಸ್ತೆ ಬದಿ ಸೇರಿದಂತೆ ಅಲ್ಲಿ-ಇಲ್ಲಿ ಮೇಯುವಂತಹಾ ಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ಹಣದ ಆಸೆಗೆ ಗೋಮಾಳವನ್ನೂ ದಾಖಲೆ ಮಾಡಿ ಕೊಡುತ್ತಿದ್ದಾರೆ ಎಂಬ ಗಂಭೀರ ಆರೋಪ ಅಧಿಕಾರಿಗಳ ಮೇಲಿದೆ. ಏಕೆಂದರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್ ಸುತ್ತಮುತ್ತ ದನಕರುಗಳ ಮೇವಿಗೆ ಇದ್ದ ಗೋಮಾಳ ಒತ್ತುವರೆಯಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಹಾಗಾಗಿ, ದನಕರುಗಳು ರಸ್ತೆ ಬದಿಯಲ್ಲೇ ಮೇಯುವಂತಾಗಿದೆ. ಹೀಗೆ ಹಸಿರು ಕಂಡಲ್ಲಿ ಮೇಯುಲು ಹೋಗುವ ರಾಸುಗಳಿಂದ ಹೊಲ-ಗದ್ದೆ, ತೋಟಗಳು ಹಾಳಾಗುತ್ತಿದೆ. ಇದರಿಂದ ತೋಟದ ಮಾಲೀಕರು ಜಗಳಕ್ಕೆ ಬರುವುದು ಸರ್ವೇ ಸಾಮಾನ್ಯವಾಗಿದೆ.

ಹಾಗಾಗಿ,  ರಾಸುಗಳ ಕೊರಳಿಗೆ ದಪ್ಪನಾದ ಮರದ ತುಂಡನ್ನ ಕಟ್ಟುತ್ತಿದ್ದಾರೆ. ಹೀಗೆ ಕಟ್ಟಿದರೆ ರಾಸುಗಳು ರಸ್ತೆ ಬದಿಯಲ್ಲೇ ಮೇಯುತ್ತವೆ. ಬೇಲಿ ದಾಟಿಕೊಂಡು ತೋಟಗಳ ಒಳಗೆ ಹೋಗಲು ಆಗುವುದಿಲ್ಲ. ಹಾಗಾಗಿ, ಮೂಡಿಗೆರೆ ತಾಲೂಕಿನ ಹಲವು ಭಾಗದಲ್ಲಿ ರಾಸುಗಳ ಕೊರಳಲ್ಲಿ ಮರದ ತುಂಡು ಸಾಮಾನ್ಯವಾಗಿದೆ. ಇದಕ್ಕೆಲ್ಲಾ ಕಾರಣ ಗೋಮಾಳ ಒತ್ತುವರಿಯೇ ಎಂದು ಸ್ಥಳಿಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಧಿಕಾರಿಗಳು ಹಣದ ಆಸೆಗೆ ಗೋಮಾಳವನ್ನು ಒತ್ತುವರಿ ಮಾಡಿದವರಿಗೆ ದಾಖಲೆ ನಿರ್ಮಿಸಿ ಕೊಡುತ್ತಿದ್ದಾರೆ. ಇದರಿಂದ ರಾಸುಗಳ ಮೇವಿಗೆ ಜಾಗವಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.

Advertisement

ಇದನ್ನೂ ಓದಿ:ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ಮಲೆನಾಡಲ್ಲಿ ಯತೇಚ್ಛವಾಗಿ ಅರಣ್ಯವಿದೆ. ಅರಣ್ಯದಲ್ಲಿ ಮೇವಿಗೆ ಹೋದರೆ ರಾಸುಗಳು ವಾಸಪ್ ಮನೆಗೆ ಬರುವುದು ಅನುಮಾನ. ಕಾಡುಪ್ರಾಣಿಗಳಿಗೆ ಆಹಾರವಾಗುತ್ತದೆ. ಇದ್ದ ಗೋಮಾಳವೂ ಒತ್ತುವರೆಯಾಗಿರೋದು ರೈತರು ರಾಸುಗಳನ್ನ ಸಾಕುವುದು ಕಷ್ಟಸಾಧ್ಯವಾಗಿದೆ. ಇನ್ನು ಒಂದು ಹಳ್ಳಿ, ಗ್ರಾಮ ಪಂಚಾಯಿತಿ ಅಂದಾಗ ಇಷ್ಟೆ ಪ್ರಮಾಣದ ಗೋಮಾಳ ಇರಬೇಕೆಂದು ಕಾನೂನು ಇದೆ. ಆದರೆ, ಆ ಪ್ರಮಾಣದಲ್ಲಿ ಗೋಮಾಳ ಇಲ್ಲದಂತಾಗಿದೆ.

ಅಧಿಕಾರಿಗಳು ಸರ್ಕಾರದ ಆದೇಶವನ್ನ ಮಲೆನಾಡ ತಣ್ಣನೆಯ ಗಾಳಿಯಲ್ಲಿ ತೂರಿ ಗೋಮಾಳ ಒತ್ತುವರಿಗೂ ದಾಖಲೆ ಮಾಡಿ ಕೊಟ್ಟಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಮೊದಮೊದಲು ಗೋಮಾಳವನ್ನು ಒತ್ತುವರಿ ಮಾಡಿ ತೋಟ ಮಾಡುತ್ತಿದ್ದರು. ತದನಂತರ ಅಧಿಕಾರಿಗಳು ರೆಕಾರ್ಡ್ ಮಾಡಿಕೊಡುತ್ತಿದ್ದರು. ಆದರೆ, ಈಗ ಮೊದಲು ಗೋಮಾಳಕ್ಕೆ ದಾಖಲೆ ಮಾಡಿಕೊಡುತ್ತಿದ್ದಾರೆ. ನಂತರ ಅಲ್ಲಿ ತೋಟ ಮಾಡುತ್ತಿದ್ದಾರೆಂಬ ಆರೋಪವೂ ಇದೆ.

ರಾಸುಗಳ ಭೂಮಿಯನ್ನು ಉಳಿಸಬೇಕಾದವರೇ ಇಂದು ಹಣದ ಆಸೆಗೆ  ದಾಖಲೆ ಮಾಡಿಕೊಡುತ್ತಿರುವುದರಿಂದ ರಾಸುಗಳ ಮೇವಿಗೆ ಜಾಗವಿಲ್ಲದಂತಾಗಿದೆ. ರಾಸುಗಳು ಎಲ್ಲೆಂದರಲ್ಲಿ ಮೇಯಲು ಹಾಗೂ ದನಗಳ್ಳರ ಪಾಲಾಗುತ್ತಿವೆ. ಹಾಗಾಗಿ, ತಾಲೂಕು ಹಾಗೂ ಜಿಲ್ಲಾಡಳಿತ ಗೋಮಾಳದ ಭೂಮಿಯತ್ತ ಗಮನ ಹರಿಸಿ ರಾಸುಗಳನ್ನು ಜಾಗವನ್ನು ಉಳಿಸಬೇಕೆಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next