Advertisement

ಕಣ್ಮನ ಸೆಳೆದ ದಸರಾ ಗೊಂಬೆ ಪ್ರದರ್ಶನ

03:05 PM Oct 12, 2021 | Team Udayavani |

ಚಿಕ್ಕಮಗಳೂರು: ಶರನ್ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿನಗರದ ಸುಗ್ಗಿಕಲ್ಲು ಬಡಾವಣೆಯ ಪುರೋಹಿತ ಅಶ್ವತ್ಥ ನಾರಾಯಣಾಚಾರ್ಯ ವಿ. ಜೋಶಿ ಅವರಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆಯಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನುಅನಾವರಣಗೊಳಿಸಿವೆ.

Advertisement

ಯದುವಂಶಸ್ಥರ ಪರಂಪರೆಯ ಕೆಂಪು ಚಂದನದಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು ಮೈಸೂರುಮಹಾರಾಜರ ದಸರಾ ದರ್ಬಾರ್‌, ಜಂಬೂ ಸವಾರಿ,ಅರಮನೆ, ಅರಸರ ಸಾಂಪ್ರದಾಯಿಕ ಆಚರಣೆಗಳವೈಭವವನ್ನು ಅನಾವರಣಗೊಳಿಸಿದ್ದರೆ, ಇನ್ನೂ ಕೆಲವುಗೊಂಬೆಗಳು ದೇವತೆಗಳ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿವೆ.

ಪದ್ಮಾವತಿ ಹಾಗೂ ಶ್ರೀನಿವಾಸಕಲ್ಯಾಣ ವೈಭವ ಸಾರುವ ಶ್ರೀನಿವಾಸ ಕಲ್ಯಾಣಗೊಂಬೆಗಳು ನೋಡುಗರ ಗಮನ ಸೆಳೆಯುತ್ತಿವೆ.ವರನ ದಿಬ್ಬಣವನ್ನು ಎದುರುಗೊಳ್ಳುವುದು. ವರಪೂಜೆಮಾಂಗಲ್ಯ ಧಾರಣೆ, ಲಾಜಾಹೋಮ, ಸಪ್ತಪದಿ ತುಳಿಯುವುದು ಸೇರಿದಂತೆ ಮದುವೆಯ ಆಚರಣೆದೃಶ್ಯಗಳು ಕಣ್ಮನ ಸೆಳೆಯುತ್ತಿವೆ.ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ತನ್ನ ಬೆರಳಿನಲ್ಲಿಎತ್ತಿಹಿಡಿದು ಗೋಪಾಲಕರು ಮತ್ತು ಗೋವುಗಳನ್ನುರಕ್ಷಿಸುವ ದೃಶ್ಯ, ಕೈಲಾಸ ಪರ್ವತದಲ್ಲಿ ಬ್ರಹ್ಮ, ವಿಷ್ಣು,ನಂದಿ, ಭೃಂಗಿ- ಶಿವಗಣಗಳು, ಋಷಿಮುನಿಗಳನಡುವೆ ಶಿವ ಪಾರ್ವತಿಯರ ಒಡ್ಡೋಲಗದ ದೃಶ್ಯಗಮನ ಸೆಳೆಯುತ್ತಿದೆ.

ಕೃಷಿ ಚಟುವಟಿಕೆ, ಸಂತೆಯದೃಶ್ಯಗಳು, ಭಾರತೀಯ ಹಬ್ಬ-ಹರಿದಿನಗಳು ವಿವಿಧಆಚರಣೆಗಳನ್ನು ತೆರೆದಿಡುವ ನೂರಾರು ಗೊಂಬೆಗಳುಮನಸ್ಸಿಗೆ ಮುದ ನೀಡುತ್ತಿವೆ.ಪುರೋಹಿತ ಅಶ್ವತ್ಥನಾರಾಯಣಾಚಾರ್ಯವಿ.ಜೋಶಿ ಮಾತನಾಡಿ, ಆಧುನಿಕತೆಯಿಂದ ನಮ್ಮಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯಗಳ ಅರಿವೇಇಲ್ಲದಿರುವ ಇಂದಿನ ಪೀಳಿಗೆಯ ಮಕ್ಕಳಿಗೆ ಅವುಗಳನ್ನುಪರಿಚಯಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವಉದ್ದೇಶದಿಂದ 20 ವರ್ಷಗಳಿಂದ ಪ್ರತೀ ವರ್ಷಮನೆಯಲ್ಲಿ ಪಟ್ಟದ ಗೊಂಬೆಗಳನ್ನು ಪ್ರತಿಷ್ಠಾಪಿಸಿಪೂಜಿಸಲಾಗುತ್ತಿದೆ. ಇದರ ಜೊತೆಗೆ ನವರಾತ್ರಿಯ 9ದಿನಗಳ ಕಾಲ ಪ್ರತೀ ದಿನ ಸಂಜೆ ಶ್ರೀನಿವಾಸ ಕಲ್ಯಾಣದಪುರಾಣ, ಪ್ರವಚನ ಮಾಡಲಾಗುತ್ತಿದೆ ಎಂದರು.

ಆಯೋಜಕಿ ಅನುರಾಧಾ ಜೋಶಿ ಮಾತನಾಡಿ,ಇಂದಿನ ಮಕ್ಕಳಿಗೆ ನಮ್ಮ ಹಬ್ಬ-ಹರಿದಿನ ಮತುಸಂಪ್ರದಾಯಗಳನ್ನು ತಿಳಿಸುವ ನಿಟ್ಟಿನಲ್ಲಿ ತಮ್ಮ ತವರುಮನೆಯಿಂದ ಬಳುವಳಿಯಾಗಿ ಬಂದಿರುವ ಪಟ್ಟದಗೊಂಬೆಗಳ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದುತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next