Advertisement

ಮೂಡಿಗೆರೆಯಲ್ಲಿ ಬಂದ್‌ಗೆ ಬೆಂಬಲ

06:33 PM Apr 25, 2021 | Team Udayavani |

ಮೂಡಿಗೆರೆ: ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ವಿ ಧಿಸಿದ್ದ ವೀಕೆಂಡ್‌ ಕರ್ಫ್ಯೂಗೆ ಮೂಡಿಗೆರೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತುರ್ತುಸೇವೆ, ಮೆಡಿಕಲ್‌ ಶಾಪ್‌ಗ್ಳು, ಆಸ್ಪತ್ರೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳು ಸಂಪೂರ್ಣ ಬಂದ್‌ ಆಗಿದ್ದವು.

Advertisement

ಜಿಲ್ಲಾಡಳಿತದ ಸೂಚನೆ ಹಿನ್ನೆಲೆಯಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಪೊಲೀಸರು ಧ್ವನಿವರ್ಧಕ ಬಳಸಿ ಅಂಗಡಿ ಮಳಿಗೆಗಳನ್ನು ಬಂದ್‌ ಮಾಡುವಂತೆ ಎಚ್ಚರಿಸುವ ಸೂಚನೆ ಎಲ್ಲರ ಗಮನ ಸೆಳೆಯಿತು. ಶುಕ್ರವಾರ ಸಂತೆಯ ದಿನವಾಗಿದ್ದರಿಂದಲೋ ಅಥವಾ ಲಾಕ್‌ಡೌನ್‌ ಭೀತಿಯ ಹಿನ್ನೆಲೆಯಲ್ಲಿಯೋ ಶನಿವಾರ ಬೆಳಗ್ಗೆ ಅಂಗಡಿ- ಮುಂಗಟ್ಟುಗಳು ತೆರೆದರೂ ಸಹ ಜನ ಮಾತ್ರ ಹೊರಗೆ ಬರಲೇ ಇಲ್ಲ. ಇನ್ನು ಶನಿವಾರ ವಾರಾಂತ್ಯವಾಗಿದ್ದು ಸಹಜ ದಿನಗಳಲ್ಲಿ ಸ್ಥಳೀಯ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಆಗಮಿಸುತ್ತಿದ್ದ ಪ್ರವಾಸಿಗರು, ವಾಹನ ದಟ್ಟಣೆ ಇಲ್ಲದೆ ಸ್ವತ್ಛ ಹಾಗೂ ಸುಂದರ ಪರಿಸರದ ಅನುಭವವಾಯಿತು.

ಒಟ್ಟಾರೆ ವಾರಾಂತ್ಯದಲ್ಲಿ ಕರ್ಫ್ಯೂ ಹೇರಿದ್ದರಿಂದ ಮೂಡಿಗೆರೆಯ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅನಾವಶ್ಯಕವಾಗಿ ತಿರುಗಾಡುವವರ ಮೇಲೆ ಗಮನವಿಟ್ಟಿರುವ ಪೊಲೀಸ್‌ ಇಲಾಖೆ ಸೂಕ್ತ ಎಚ್ಚರಿಕೆ ನೀಡುತ್ತಿರುವುದು ಪುಂಡ- ಪೋಕರಿಗಳಿಗೆ ಭಯ ಹುಟ್ಟಿಸಿರುವುದಂತೂ ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next