Advertisement

ಬೆಲೆ ಇಲ್ಲದೆ ಗಿಡದಲ್ಲೇ ಉಳಿದ ಟೊಮೆಟೋ

05:12 PM May 22, 2021 | Team Udayavani |

ಚೇಳೂರು: ಸದಾ ಬರಕ್ಕೆ ತುತ್ತಾಗುತ್ತಿರುವಹೋಬಳಿಯ ರೈತರು ಹೈನುಗಾರಿಕೆ, ತರಕಾರಿಬೆಳೆಯನ್ನೇ ನಂಬಿಕೊಂಡು ಜೀವನಸಾಗಿಸುತ್ತಿದ್ದಾರೆ. ನಿರಂತರ ಬೆಲೆ ಕುಸಿತದಿಂದಕಂಗೆಟ್ಟಿದ್ದ ಬೆಳೆಗಾರರಿಗೆ ಇದೀಗ ಕೊರೊನಾಲಾಕ್‌ಡೌನ್‌ ಉಸಿರುಗಟ್ಟಿಸುವ ವಾತಾವರಣನಿರ್ಮಾಣ ಮಾಡಿದೆ.ನಿರಂತರ ಬೆಲೆಕುಸಿತ: ಎರಡು-ಮೂರು ವರ್ಷಗಳಿಂದ ತರಕಾರಿಗೆ ಉತ್ತಮ ಬೆಲೆ ದೊರೆತಿಲ್ಲ,ಕಳೆದ ವರ್ಷ ಒಂದರೆಡು ವಾರ ಬಿಟ್ಟರೆ, ಬೆಲೆಯಲ್ಲಿ ಚೇತರಿಕೆ ಉಂಟಾಗಿಲ್ಲ,

Advertisement

ಈ ನಡುವೆಕೊರೊನಾ ಸಂಕಷ್ಟದಿಂದ ಕೈಗೆ ಬಂದಿದ್ದ ಟೊಮೆಟೋ, ಕ್ಯಾರೆಟ್‌ ಈಗ ಮಣ್ಣು ಪಾಲಾಗುತ್ತಿದೆ.ಇದು ರೈತರ ಆರ್ಥಿಕ ನಷ್ಟಕ್ಕೆಕಾರಣವಾಗಿದೆ.

ಹಾಕಿದ್ದ ಬಂಡವಾಳವೂ ಸಿಗಲ್ಲ:10 ಲಕ್ಷ ರೂ.ಬಂಡವಾಳ ಹಾಕಿ 10 ಎಕರೆಯಲ್ಲಿ ಕ್ಯಾರೆಟ್‌ಬೆಳೆಯಲಾಗಿತ್ತು. ನಿರೀಕ್ಷೆಯಂತೆ ಬೆಲೆ ಸಿಕ್ಕಿದ್ದರೆ50 ಲಕ್ಷ ರೂ.ವರೆಗೂ ಲಾಭ ಪಡೆಯಬಹುದಿತ್ತು. ಹಾಗೆಯೇ, 5 ಲಕ್ಷ ರೂ.ಬಂಡವಾಳ ಹಾಕಿ 11 ಎಕರೆ ಜಮೀನಿನಲ್ಲಿಟೊಮೆಟೋ ಬೆಳೆ ಬೆಳೆದಿದ್ದು, 20 ಲಕ್ಷ ರೂ.ಲಾಭದ ನಿರೀಕ್ಷೆ ಇತ್ತು. ಆದರೆ, ಈಗ ಹಾಕಿದ್ದಬಂಡವಾಳವೂ ಬರದೆ ಸಾಲದ ಸುಳಿಗೆಸಿಲುಕುವಂತಾಗಿದೆ ಎಂದು ಪ್ರಗತಿಪರ ರೈತಬೈರಪ್ಪನಪಲ್ಲಿ ಗ್ರಾಮದಕೆ.ಸಹದೇವರೆಡ್ಡಿ ತಮ್ಮಅಳಲು ತೋಡಿಕೊಂಡಿದ್ದಾರೆ.

ನಿರಂತರ ಬೆಲೆ ಕುಸಿತ: ಹೋಬಳಿಯಲ್ಲಿ 2ಸಾವಿರ ಹೆಕ್ಟೇರ್‌ನಲ್ಲಿ ಟೊಮೆಟೋ ಬೆಳೆಯಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿವರ್ಷಕ್ಕೆ 25 ಕೋಟಿ ರೂ.ಗೂ ಹೆಚ್ಚುವಹಿವಾಟು ನಡೆಯುತ್ತದೆ. ಅಲ್ಲದೇ, ನೆರೆಯಆಂಧ್ರದಿಂದಲೂ ಹೆಚ್ಚಿನ ಪ್ರಮಾಣದಲ್ಲಿಟೊಮೆಟೋವನ್ನು ಇಲ್ಲಿಗೆ ತರಲಾಗುತ್ತದೆ. ಈಕಾರಣದಿಂದ ಬೆಲೆಯಲ್ಲಿ ಏರುಪೇರಾಗುತ್ತಿದೆ.ಕಳೆದ ಆರು ತಿಂಗಳಿಂದ ಟೊಮೆಟೋ ಬೆಲೆಗಣನೀಯವಾಗಿ ಕುಸಿಯುತ್ತಲೇ ಇದೆ. ಸಾಲಮಾಡಿ ಬೆಳೆ ಬೆಳೆದವರು ಇದೀಗ ಸಂಕಷ್ಟಕ್ಕೆಸಿಲುಕುವಂತಾಗಿದೆ.

ಲೋಕೇಶ್‌ ಪಿ.ವಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next