ಗೌರಿಬಿದನೂರು: ಪ್ರಧಾನಿ ಮೋದಿ ಆಡಳಿತಶೈಲಿ ಅನಾ ವಶ್ಯಕ ಟೀಕಿಸುವುದರ ಮೂಲಕಕಾಂಗ್ರೆಸ್ಸಿಗರು ರಾಜ್ಯದಲ್ಲಿ ಅಧಿಕಾರಕ್ಕೇರುವಕನಸು ಕಾಣುತ್ತಿದ್ದಾರೆ ಎಂದು ರಾಜ್ಯ ಬಿಜೆಪಿಪ್ರಧಾನ ಕಾರ್ಯದರ್ಶಿ ಕೇಶವಪ್ರಸಾದ್ ಟೀಕಿಸಿದರು.
ಗೌರಿಬಿದನೂರು ಬಿಜೆಪಿ ನಗರ,ಗ್ರಾಮೀಣ ಮಂಡಲಗಳ ಪ್ರತ್ಯೇಕ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ಗೆ ಕನಿಷ್ಠ ಪಿಪಿಇ ಕಿಟ್ ತಯಾರಿಸಲುಈವರೆಗೂ ಆಗಿಲ್ಲ, ವ್ಯಾಕ್ಸಿನ್ ಬಗ್ಗೆ ಟೀಕಿಸಿದವಿರೋಧ ಪಕ್ಷದವರು ಸೋಂಕಿಗೆ ತುತ್ತಾಗಿ,ನಂತರ ಲಸಿಕೆಗೆ ಶರಣಾಗಿದ್ದು, ಇಡೀ ದೇಶಕ್ಕೆಗೊತ್ತಿದೆ ಎಂದು ವ್ಯಂಗ್ಯವಾಡಿದರು.ಐದು ಬಾರಿ ವಿಧಾನಸಭೆಗೆ ಗೌರಿಬಿದನೂರು ತಾಲೂಕಿನಿಂದ ಚುನಾಯಿತರಾದಶಾಸಕ ಶಿವಶಂಕರರೆಡ್ಡಿ, ಕೊರೊನಾ ತೀವ್ರತೆ ಇದ್ದಾಗ ಕನಿಷ್ಠ ಜನರ ಮಧ್ಯೆ ಇದ್ದು, ಧೈರ್ಯತುಂಬುವ ಕೆಲಸ ಮಾಡಲಿಲ್ಲ ಎಂದು ದೂರಿದರು.
ಗೌರಿಬಿದನೂರು ಬಿಜೆಪಿ ನಗರಘಟಕದಅಧ್ಯಕ್ಷ ಮಾರ್ಕೆಟ್ ಮೋಹನ್ ಮಾತನಾಡಿ,ಕೋವಿಡ್ ಸಂದರ್ಭದಲ್ಲಿ ತಾಲೂಕಿನ ಬಿಜೆಪಿಕಾರ್ಯ ಕರ್ತರು, ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ. ಕೋವಿಡ್ ತೀವ್ರತೆ ಇದ್ದಾಗ ನಗರದಎಂ.ಜಿ.ವೃತ್ತ, ಸಾರ್ವ ಜನಿಕ ಆಸ್ಪತ್ರೆ ಆವರಣದಲ್ಲಿ ಹೆಲ್ಪ್ಡೆಸ್ಕ್ ಅನ್ನು ತರೆಯಲಾಗಿತ್ತು.ಪ್ರಧಾನಿ ನರೇಂದ್ರಮೋದಿ ಕರೆಯಂತೆ ನಗರದ ಪ್ರತಿಬೂತ್ ನಲ್ಲೂ ಕಾರ್ಯಕರ್ತರ ಪಡೆಕಟ್ಟಲಾಗುವುದು ಎಂದು ಹೇಳಿದರು.
ಸಿಎಂಯಡಿಯೂರಪ್ಪ ಕೋವಿಡ್‌ಗೆ ತುತ್ತಾಗಿಮೃತರಾದವರ ಕುಟುಂಬಕ್ಕೆ 1ಲಕ್ಷ ರೂ.ಪರಿಹಾರ ಮೊತ್ತ ನೀಡುತ್ತಿರುವುದು ದೇಶಕ್ಕೆಮಾದರಿ. ಜಿಲ್ಲಾ ಉಸ್ತುವಾರಿಯೂ ಆದಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಪಕ್ಷದ ಜಿÇÉಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಕಮಲ ಅರಳುವುದು ಖಚಿತ ಎಂದುಹೇಳಿದರು. ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿಮಾತ ನಾಡಿ, ಪಕ್ಷದ ಕಾರ್ಯಕರ್ತರು ಎದಗುಂದದೆ ಪಕ್ಷ ಕಟ್ಟಬೇಕು, ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದರು.
ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷಎನ್.ಎಂ. ರವಿ ನಾರಾಯಣ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಮುರಳೀಧರ್ ಪಕ್ಷದ ಚಟುವಟಿಕೆ ಬಗ್ಗೆ ಹೇಳಿದರು. ಮುಖಂಡರಾದಎ. ಮೋಹನ್, ರಮೇಶ್‌ರಾವ್, ಮುನಿನಾರಾಯಣ ರೆಡ್ಡಿ, ಆನಂದರೆಡ್ಡಿ, ಇತರರಿದ್ದರು. ಸಭೆಯಲ್ಲಿ ಡಿ.ಜೆ.ಚಂದ್ರಮೋಹನ್ ವಿಷಯ ಮಂಡಿ ಸಿದರೆ, ಪರಿಣಿಧಿ ಮಂಜು ನಿರೂಪಿಸಿದರು. ಕಾರ್ಯದರ್ಶಿ ಜಯ್ಯಣ್ಣ ಸ್ವಾಗತಿಸಿದರು.