Advertisement

ವಾಡಿಕೆಗೂ ಹೆಚ್ಚು ಮಳೆ; ಶೇ.80 ಬಿತ್ತನೆ ಕಾರ್ಯ ಪೂರ್ಣ

06:54 PM Jul 24, 2021 | Team Udayavani |

ಗೌರಿಬಿದನೂರು: ತಾಲೂಕಿನಲ್ಲಿ ಮುಂಗಾರುಮಳೆ ಉತ್ತಮವಾಗಿ ಬೀಳುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈಗಾಗಲೇ ಬಿತ್ತನೆ ಕಾರ್ಯಶೇ.80 ಪೂರ್ಣಗೊಂಡಿದ್ದು, ಉಳಿದವರೂಬಿರುಸಿನಿಂದ ಬಿತ್ತನೆ ಮಾಡುತ್ತಿದ್ದಾರೆ.

Advertisement

36,542 ಹೆಕ್ಟೇರ್‌ ಬಿತ್ತನೆ ಗುರಿ: ತಾಲೂಕಿನಲ್ಲಿ ಜೂನ್‌ ತಿಂಗಳ ಮೊದಲ ವಾರದಲ್ಲೇ ಮುಂಗಾರುಮಳೆ ಉತ್ತಮ ಆರಂಭ ಕಂಡಿದ್ದು, ರೈತರು ಭೂಮಿಹದಗೊಳಿಸಿ ಶೇ.80ರಷ್ಟು ಬಿತ್ತನೆ ಕಾರ್ಯ ಮುಗಿಸಿದ್ದಾರೆ.

ಈ ಬಾರಿ ತಾಲೂಕಿನಲ್ಲಿ 36,542 ಹೆಕ್ಟೇರ್‌ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಖುಷ್ಕಿ ಬೆಳೆ33,789 ಹೆಕ್ಟೇರ್‌ ಗುರಿ ಇದ್ದು, 26,660 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ನೀರಾವರಿಯಲ್ಲಿ 2,753ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ 2185 ಹೆಕ್ಟೇರ್‌ನಷ್ಟಗುರಿ ಸಾಧಿಸಲಾಗಿದೆ.

ಬಿತ್ತನೆ ಬೀಜ ದಾಸ್ತಾನು: ತಾಲೂಕಿನಲ್ಲಿ ಒಟ್ಟು1650 ಕ್ವಿಂಟಲ್‌ ಬಿತ್ತನೆ ಬೀಜವನ್ನು ದಾಸ್ತಾನುಮಾಡಲಾಗಿದೆ. ಮುಸುಕಿನ ಜೋಳ 800 ಕ್ವಿಂಟಲ್‌,ರಾಗಿ 181 ಕ್ವಿಂಟಲ್‌, ನೆಲಗಡಲೆ 531 ಕ್ವಿಂಟಲ್‌,ತೊಗರಿ 147ಕ್ವಿಂಟಲ್‌ ದಾಸ್ತಾನು ಮಾಡಲಾಗಿದೆ.ಸರ್ಕಾರ ಡಿಎಪಿ ರಸಗೊಬ್ಬರಕ್ಕೆ 700 ರೂ. ಸಬ್ಸಿಡಿನೀಡುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತೊಗರಿ, ನೆಲಗಡಲೆ, ಮುಸುಕಿನಜೋಳ,ಇತರೆ ದ್ವಿದಳ ಧಾನ್ಯ ಬಿತ್ತನೆಗೆ ಸಕಾಲವಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ವಿವರ:ಕಳೆದಜನವರಿ 21ರಿಂದಜು.21ರವರೆಗೆತಾಲೂಕಾದ್ಯಂತ ಒಟ್ಟು 19177.5 ಮಿ.ಮೀ. ಮಳೆಯಾಗಿದೆ. ಉತ್ತಮ ಮಳೆ ಆಗಿರುವುದರಿಂದ ರಾಗಿ,ಮುಸುಕಿನಜೋಳ, ಅವರೆ, ಅಲಸಂದೆ, ಹುರುಳಿಹಾಗೂ ಸಿರಿಧಾನ್ಯಗಳನ್ನು ಆ.15ರವರೆಗೂ ಬಿತ್ತನೆಮಾಡಬಹುದು ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.

Advertisement

ವಿ.ಡಿ.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next