Advertisement
ಇದಕ್ಕೆ ಉದಾಹರಣೆ ಒಂದನೇ ವಾರ್ಡ್. ಗ್ರಾಮದ ಒಂದೇ ವಾರ್ಡ್‌ನಲ್ಲಿರುವಚಿಂತಾಮಣಿ ರಸ್ತೆಯ ಎಪಿಎಂಸಿ ಮಾರುಕಟ್ಟೆಮುಂಭಾಗದ ಶಾಂತಿನಗರ ಬಡಾವಣೆ ನಿವಾಸಿಗಳಜೀವನ ನರಕವಾಗಿದೆ. ಮನೆ ಸುತ್ತಮುತ್ತಲಿನಪರಿಸರ ಸ್ವತ್ಛವಾಗಿಟ್ಟುಕೊಳ್ಳುವಂತೆ ಸಲಹೆ ನೀಡುವ ಪಿಡಿಒ, ಗ್ರಾಪಂ ಸದಸ್ಯರು, ಈ ಕೊರೊನಾಸಂದರ್ಭದಲ್ಲಾದ್ರೂ ಚರಂಡಿಗಳನ್ನು ಸ್ವತ್ಛಗೊಳಿಸಿ,ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಕಸ ವಿಲೇವಾರಿ ಮಾಡಿಸಲು ಕ್ರಮಕೈಗೊಂಡಿಲ್ಲ.
Related Articles
Advertisement
ಈ ಬಗ್ಗೆ ಸ್ಥಳೀಯ ಆಡಳಿತ ಸೂಕ್ತಕ್ರಮ ಕೈಗೊಳ್ಳಬೇಕಿದೆ.
ಮೂಗುಮುಚ್ಚಿಕೊಂಡು ಓಡಾಡಬೇಕು: ಚರಂಡಿಮುಚ್ಚಿಹೋಗಿ ವರ್ಷಗಳೇ ಕಳೆದಿದೆ. ಆಗಲೂಕೊಳಚೆ ನೀರು ರಸ್ತೆ, ಖಾಲಿ ನಿವೇಶನ, ಮನೆಯಅಂಗಳದಲ್ಲಿ ಮಡುಗಟ್ಟಿ ನಿಂತಿದೆ. ಕೊಳಚೆ ನೀರಿನಲ್ಲಿ ಪ್ಲಾಸ್ಟಿಕ್, ಮಾಂಸದ ತ್ಯಾಜ್ಯ, ಹಸಿ ಕಸ ಸೇರಿಕೊಂಡು ದುರ್ನಾತ ಬೀರುತ್ತದೆ. ಗಾಳಿ ಬೀಸಿದ್ರೆ ಸಾಕುಮನೆಯಲ್ಲಿ ಕೂರಲಾಗದ ಮಟ್ಟಿಗೆ ದುರ್ವಾಸನೆ ಬೀರುತ್ತದೆ. ಮೂಗು ಮುಚ್ಚಿಕೊಂಡುಓಡಾಡಬೇಕಿದೆ. ಆರೋಗ್ಯವಂತ ಮನುಷ್ಯ ಒಂದುವೇಳೆ ಈ ಬಡಾವಣೆಗೆ ಬಂದರೆ ಅನಾರೋಗ್ಯಕ್ಕೆಒಳಗಾಗುತ್ತಾನೆ ಎಂದು ಬಡಾವಣೆ ನಿವಾಸಿಇಂದ್ರಜಾಲಂ ಆರ್.ಮಧುಸೂದನ್ ತಮ್ಮ ಅಳಲುತೋಡಿಕೊಂಡಿದ್ದಾರೆ.