ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಆವರಣದಲ್ಲಿ ಭಕ್ತರು ಶುಕ್ರವಾರ ಹಾಗೂ ಅಮಾವಾಸ್ಯೆ ಸೇರಿದಂತೆ ಇತರೆ ದಿನಗಳಲ್ಲಿ ರಾತ್ರಿ ತಂಗುವುದನ್ನು ನಿಷೇಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಅಧಿಕಾರಿ ನವೀದ್ ಪಾಷ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಅಮಾವಾಸ್ಯೆಯಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಬಂದಿದ್ದರು ಅವರಿಗೆ ದರ್ಗಾ ಒಳಾಂಗಣದಲ್ಲಿ ತಂಗಲು ಅವಕಾಶ ಮಾಡಿಕೊಡಲಿಲ್ಲ ಆ ಕಾರಣಕ್ಕೆ ಭಕ್ತಾದಿಗಳಿಗೆ ತೊಂದರೆಯಾಗಿತ್ತು.
ಸರ್ಕಾರದ ಆದೇಶದಂತೆ ದರ್ಗಾ ಒಳಾವರಣ ಹಾಗೂ ಹೊರಾವರಣದಲ್ಲಿ ತಂಗಲು ಅವಕಾಶವಿಲ್ಲ ಭಕ್ತಾಧಿಗಳು ಸಹಕರಿಸಬೇಕೆಂದು ಅವರು ಕೋರಿದರು.
ಇದನ್ನೂ ಓದಿ:ಈ ಬಾರಿ ಕಡಲೆಕಾಯಿ ಪರಿಷೆ ಸರಳವಾಗಿ ಆಚರಿಸಲು ಧಾರ್ಮಿಕ ದತ್ತಿ ಇಲಾಖೆ ಆದೇಶ
ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ ದರ್ಗಾ ತೆರೆದಿರುತ್ತದೆ ದರ್ಗಾದಲ್ಲಿ ಪ್ರಸಾದ ತಂದು ಹಂಚುವುದನ್ನು ನಿಷೇಧಿಸಲಾಗಿದೆ. ಮಾಸ್ಕ್ ಧರಿಸಿಕೊಂಡು ಬರಬೇಕು ಎಂದು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ದರ್ಗಾ ಮೇಲ್ವಿಚಾರಕರಾದ ಎಂ ಎ ತಯ್ಯೂಬ್ ನವಾಜ್, ಮುಖಂಡರಾದ ಹಾಜಿ ಅನ್ಸರ್ ಖಾನ್, ಬಶೀರ್ ಖಾನ್ ಉಪಸ್ಥಿತರಿದ್ದರು.