Advertisement

ಚಿಕ್ಕಬಳ್ಳಾಪುರ : ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಚರಣೆ –ಅಕ್ರಮ ಒತ್ತುವರಿ ಪ್ರದೇಶ ತೆರವು

10:14 PM Mar 12, 2021 | Team Udayavani |

ಚಿಕ್ಕಬಳ್ಳಾಪುರ : ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗಗಳನ್ನು ಸಂರಕ್ಷಣೆ ಮಾಡುವ ಮೂಲಕ ರಾಜ್ಯದ ಗಮನಸೆಳೆದ ವಲಯ ಅರಣ್ಯಾಧಿಕಾರಿಗಳು ಶ್ರೀ ಲಕ್ಷ್ಮೀ ಮತ್ತೊಮ್ಮೆ ಸುಧ್ಧಿಯಲ್ಲಿದ್ದಾರೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಎಫ್ ಅರ್ಸಲನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀ ಲಕ್ಷ್ಮೀ ಮತ್ತು ಸಿಬ್ಬಂದಿ ಕಾರ್ಯಚರಣೆ ನಡೆಸಿ ಚಿಕ್ಕಬಳ್ಳಾಪುರ ವಲಯದ, ನಂದಿ ಶಾಖೆಯ,ನರಸಿಂಹ ದೇವರಬೆಟ್ಟ ಬ್ಲಾಕ್ 2 ವ್ಯಾಪ್ತಿಯ ಕೊರ್ಲಹಳ್ಳಿ ಸ.ನಂ 11,ಮಧುರೆನಹಳ್ಳಿ ಸ.ನಂ 37 ರ ಒಟ್ಟು 40 ಎಕರೆ ಅನಧಿಕೃತ ಒತ್ತುವರಿ ಅರಣ್ಯ ಪ್ರದೇಶವನ್ನು ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು ವರ್ಷಗಳಿಂದ ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆನ್ನಲಾಗಿದ್ದು ಕೊನೆಗೂ ಕಾರ್ಯಚರಣೆ ನಡೆಸಿ ಕೋಟ್ಯಾಂತರ ರೂಗಳು ಬೆಲೆ ಬಾಳುವ ಅರಣ್ಯ ಸಂಪತ್ತು ಸಂರಕ್ಷಣೆ ಮಾಡಿದ್ದಾರೆ ಚಿಕ್ಕಬಳ್ಳಾಪುರ ವಲಯ ಅರಣ್ಯಾಧಿಕಾರಿ ಶ್ರೀ ಲಕ್ಷ್ಮೀ ಅವರು ನಡೆಸಿದ ಕಾರ್ಯಚರಣೆಗೆ ಡಿವೈಆರ್ ಎಫ್‍ಓ ವಿಜಯಕುಮಾರ್,ತನ್ವೀರ್ ಅಹಮದ್, ಪ್ರತಿಮಾ,ಅರಣ್ಯ ರಕ್ಷಕ ಮಲ್ಲಿಕಾರ್ಜುನ್,ಅವಿನಾಶ್,ರಾಜು,ಶ್ರೀಕಲಾ,ಅರಣ್ಯ ವೀಕ್ಷಕ ವೆಂಕಟೇಶ,ಹನುಮಂತಪ್ಪ ಸಾಥ್ ನೀಡಿದ್ದಾರೆ ಜೆಸಿಬಿ ಮೂಲಕ ಟ್ರಂಚಿಂಗ್ ಮಾಡಿ ಜಮೀನನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕಳೆದ 20 ದಿನಗಳ ಹಿಂದೆಯೂ ಕಾರ್ಯಚರಣೆ ನಡೆಸಿ ಮಂಡಿಕಲ್ ಹೋಬಳಿಯ ಗುಡಿಸಲಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 20 ಎಕರೆ ಅರಣ್ಯ ಜಮೀನು ವಶಪಡಿಸಿಕೊಂಡಿದ್ದಾರೆ ಈ ಕಾರ್ಯಚರಣೆಗೆ ಡಿ.ಆರ್.ಎಫ್.ಓ ನರಸಿಂಹಮೂರ್ತಿ,ಗಾರ್ಡ್ ಝಬೀಉಲ್ಲಾ,ಸಲೀಂ ಮಲ್ಲಿಕ್ ಸಾಥ್ ನೀಡಿದ್ದಾರೆ ಒಟ್ಟಾರೇ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ 60 ಎಕರೆ ಜಮೀನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next