Advertisement

ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿ : ಯುವತಿಯ ಅಣ್ಣನಿಂದಲೇ ಯುವಕನ ಬರ್ಬರ ಕೊಲೆ

03:47 PM Oct 02, 2022 | Team Udayavani |

ಚಿಕ್ಕಬಳ್ಳಾಪುರ : ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಮಾಡುತ್ತಿದ್ದ ಯುವಕನನ್ನು ಯುವತಿಯ ಅಣ್ಣ ಸ್ಕೆಚ್ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

Advertisement

ಮೂಲತಃ ದೊಡ್ಡಬಳ್ಳಾಪುರದ ನಿವಾಸಿ ನಂದನ್(22) ಕೊಲೆಗೀಡಾದ ಯುವಕ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ದರ್ಶನ್ ಮತ್ತು ಆತನ ಸ್ನೇಹಿತ ಆಶ್ರಯ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

ತಂಗಿಯನ್ನು ಚುಡಾಯಿಸಿ ಪ್ರೀತಿ-ಪ್ರೇಮದ ಜಾಲ ಬೀಸುತ್ತಿದ್ದ ನಂದನ್‍ಗೆ ಎಚ್ಚರಿಕೆ ನೀಡುತ್ತಾ ಬಂದಿದ್ದ ದರ್ಶನ್ ಕುಪಿತಗೊಂಡು ನಗರದ ಹೊರವಲಯದಲ್ಲಿರುವ ಹಾರೋಬಂಡೆ ಬೆಟ್ಟದಲ್ಲಿ ಉಪಾಯದಿಂದ ನಂದನ್ ಎಂಬಾತನನ್ನು ಮಾತುಕತೆಗೆ ಕರೆದುಕೊಂಡು ವಾದ-ವಿವಾದ ನಡೆಸಿ ನಂತರ ದರ್ಶನ್ ಮತ್ತು ಆತನ ಸಹಚರರು ಸೇರಿ ನಂದನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಗಾಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನಂದನ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ ಈ ವಿಚಾರ ತಿಳಿದ ಬಾಲಕಿಯ ಸಹೋದರ ದರ್ಶನ್ ನಂದನ್ ಮತ್ತು ಆತನ ಕುಟುಂಬದವರಿಗೆ ಎಚ್ಚರಿಕೆ ನೀಡಿದ್ದರೆಂದು ಹೇಳಲಾಗಿದೆ ಆದರೂ ಸಹ ನಂದನ್ ಅಪ್ರಾಪ್ತ ಬಾಲಕೀಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದರಿಂದ ಕುಪಿತಗೊಂಡು ದರ್ಶನ್ ಮತ್ತು ಆತನ ಸಹಚರರು ಸ್ಕೆಚ್ ಹಾಕಿ ನಂದನ್‍ನನ್ನು ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿರುವುದಾಗಿ ಡಿವೈಎಸ್ಪಿ ವಾಸುದೇವ ಉದಯವಾಣಿಗೆ ತಿಳಿಸಿದ್ದಾರೆ.

Advertisement

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಪ್ರದೀಪ್ ಪೂಜಾರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಸಿಪಿಐ ರಾಜು ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ : ಉದ್ಧವ್ ಠಾಕ್ರೆಗೆ ದೊಡ್ಡ ಹೊಡೆತ; ಏಕನಾಥ್ ಶಿಂಧೆ ಬಣ ಸೇರಿದ 3000 ಶಿವಸೇನೆ ಸದಸ್ಯರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next