Advertisement

ಕೋವಿಡ್ ಕೇರ್ ಸೆಂಟರ್‌ನಲ್ಲಿ ವೃದ್ದ ಆತ್ಮಹತ್ಯೆ..!

06:20 PM May 21, 2021 | Team Udayavani |

ಗುಡಿಬಂಡೆ : ಕೊರೋನಾ ಸೊಂಕಿನಿಂದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಡಿಬಂಡೆಯಲ್ಲಿ ನಡೆದಿದೆ.

Advertisement

ತಾಲ್ಲೂಕಿನ ರಾಮಗಾನಹಳ್ಳಿ ಗ್ರಾಮದ ನಿವಾಸಿಯಾದ ವೆಂಕಟರಾಯಪ್ಪ (74) ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಈತನಿಗೆ ಕೊರೋನ ಸೊಂಕು ತಗುಲಿದ್ದು ಚಿಕಿತ್ಸೆಗಾಗಿ ಮೇ 20 ರಂದು ಗುಡಿಬಂಡೆ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ನಿಗಾವಣೆಗಾಗಿ ಕೋವಿಡ್ ಕೇಂದ್ರಕ್ಕೆ  ದಾಖಲು ಮಾಡಲಾಗಿತ್ತು, ಆದರೆ ಆ ವ್ಯಕ್ತಿ ಕೋವಡ್ ಸೊಂಕಿನಿಂದ ಮನನೊಂದು ಕೊಠಡಿಯಲ್ಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ : ದತ್ತು ತುಗಾಂವಕರ್ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ, ಸಾಂತ್ವನ

ತಾಲ್ಲೂಕು ಆರೋಗ್ಯಾಧಿಕಾರಿ ನರಸಿಂಹಮೂರ್ತಿ ಈ ವಿಚಾರವಾಗಿ ಟಿ.ಹೆಚ್.ಓ. ಕಛೇರಿಯಲ್ಲಿ ಪತ್ರಿಕಾ ಗೋಷ್ಠಿ ಕರೆದು ಮಾತನಾಡಿ, ಈತ ದಿನಾಂಕ 20 ರಂದು ಕೊರೋನಾ ಪಾಸಿಟೀವ್ ಬಂದಿರುವ ಕಾರಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದು, ಅಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದು, ಪಟ್ಟಣ ಹೊರವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾಗಿರುತ್ತಾರೆ, ಅವರು ರಾತ್ರಿ ಊಟ ತಿಂದು ಮಲಗಲು ಕೊಠಡಿಗೆ ಹೋಗಿರುತ್ತಾರೆ, ರಾತ್ರಿ 10: 30 ರ ಸಮಯದಲ್ಲೂ ಸಹ ರಾತ್ರಿ ಪಾಳಿಯ ವೈದ್ಯರು ಅವರು ಪರೀಕ್ಷಿಸಿ ಅವರಿಗೆ ಮನಃ ದೈರ್ಯವನ್ನು ಕೊಟ್ಟಿರುತ್ತಾರೆ, ತದ ನಂತರ ಸುಮಾರು 10: 30 ರ ನಂತರ ದಿಂದ ಬೆಳಗ್ಗಿನ ವೇಳೆಯಲ್ಲಿ ಈತ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಕೊರೋನ ನೋಡಲ್ ಅಧಿಕಾರಿ ಅಶೋಕ್ ಮತ್ತು ತಹಶೀಲ್ದಾರ್ ಸಿಗ್ಬ್‌ತುಲ್ಲಾ ಹಾಜರಿದ್ದರು.

Advertisement

ಇದನ್ನೂ ಓದಿ : ನಂದಿಗ್ರಾಮದಲ್ಲಿ ಸೋತ ಮಮತಾ ಬ್ಯಾನರ್ಜಿ ಮತ್ತೆ ಭವಾನಿಪುರ್ ಕ್ಷೇತ್ರದಿಂದ ಸ್ಪರ್ಧೆ

Advertisement

Udayavani is now on Telegram. Click here to join our channel and stay updated with the latest news.

Next