Advertisement

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

08:56 PM Apr 30, 2024 | Team Udayavani |

ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಉಸಿರುಗಟ್ಟಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮದಲ್ಲಿ ಏ. 30ರ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ಮೃತ ಬಾಲಕರನ್ನು ಗ್ರಾಮದ ಸುಬ್ರಮಣಿ ಮತ್ತು ಗೌರಮ್ಮ ದಂಪತಿಯ ಪುತ್ರ ನಿತಿನ್ ಕುಮಾರ್ (15) ಹಾಗೂ ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ಅಂಗರೇಖನಹಳ್ಳಿ ಗ್ರಾಮದ ಹನುಮಂತಪ್ಪ-ಪದ್ಮ ದಂಪತಿಯ ಪುತ್ರ  ಮಂಜುನಾಥ್ (16) ಎಂದು ಗುರುತಿಸಲಾಗಿದೆ.

ನಿತಿನ್ ಕುಮಾರ್ ಹಾಗೂ ಮಂಜುನಾಥ ಇಬ್ಬರು ಕೃಷಿ ಹೊಂಡದಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ಇಬ್ಬರು ಹೊಂಡದ ಆಳಕ್ಕೆ ಇಳಿದಿದ್ದು, ಈಜಿ ಹೊರ ಬರಲು ಆಗದೇ ಮುಳುಗಿದ್ದಾರೆ.

ಇದನ್ನು ನೋಡಿ ಮತ್ತೊಬ್ಬ ಯುವಕ ಬಾಲಕರ ಮನೆಗೆ ತೆರಳಿ ಘಟನೆಯ ಬಗ್ಗೆ ತಿಳಿಸಿದ ನಂತರ ಪೋಷಕರು ಸ್ಥಳಕ್ಕೆ ಆಗಮಿಸುವ ವೇಳೆಗೆ ಇಬ್ಬರು ಹೊಂಡದಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

Advertisement

ವಿಷಯ ತಿಳಿದ ಕೂಡಲೇ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಆಗ್ನಿಶಾಮಕ ಠಾಣೆ ಸಿಬ್ಬಂದಿ ತೆರಳಿ ಇಬ್ಬರು ಬಾಲಕರ ಮೃತ ದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ  ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನಾ ಸ್ಥಳಕ್ಕೆ ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸ್ ಎಂ, ಗ್ರಾಮಾಂತರ ಪಿಎಸ್ ಐ ಸತೀಶ್ ಭೇಟಿ ನೀಡಿ  ಪರಿಶೀಲಿಸಿ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next