ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಲ್ಕನೇ ಹಂತದಲ್ಲಿ ಜೂನ್ 10ರ ಬೆಳಿಗ್ಗೆ 6 ಗಂಟೆಯಿಂದ 14ರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲಾ ಕಾರ್ಯಪಡೆ ಸಂಪೂರ್ಣವಾಗಿ ಜಿಲ್ಲಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಂದು ದಿನಸಿ ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ಜನ ಸಾಗರವೇ ಹರಿದು ಬಂದಿತ್ತು ವ್ಯಾಪಾರ ವಹಿವಾಟು ಮಾಡುವ ವೇಳೆಯಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ನಿರ್ದೇಶನ ನೀಡಿದರು ಸಹ ಜನ ಸಾಮಾಜಿಕ ಅಂತರವನ್ನು ಮರೆತು ಅಗತ್ಯ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದರು.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬೀಳುವ ಜೊತೆಗೆ ಮನೆಯಿಂದ ಅನಗತ್ಯವಾಗಿ ಸಂಚರಿಸಿದ ನಾಗರಿಕರಿಗೆ ಪೋಲಿಸ್ ಇಲಾಖೆಯ ಅಧಿಕಾರಿಗಳು ಫುಲ್ ಶಾಕ್ ನೀಡಿದ್ದಾರೆ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಉಪವಿಭಾಗದಲ್ಲಿ ಪ್ರತ್ಯೇಕವಾಗಿ ಕಾರ್ಯಚರಣೆ ನಡೆಸಿ 414 ವಾಹನಗಳನ್ನು ಜಪ್ತಿ ಮಾಡಿ 1 ಲಕ್ಷ ರೂಗಳ ದಂಡ ವಸೂಲಿ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ಡಿವೈಎಸ್ಪಿ ರವಿಶಂಕರ್,ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯ ಮತ್ತು ಜಿಲ್ಲೆಯ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ಜಿಲ್ಲಾದ್ಯಂತ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಗುರುತಿಸಿ 367 ದ್ವಿಚಕ್ರ ವಾಹನಗಳು,44 ಫೋರ್ ವ್ಹೀಲರ್,03 ತ್ರಿಚಕ್ರ ವಾಹನಗಳನ್ನು ವಾಹನಗಳನ್ನು ವಶಪಡಿಸಿಕೊಂಡು 61 ಕೇಸ್‍ಗಳನ್ನು ದಾಖಲಿಸಿ 1 ಲಕ್ಷ ರೂಗಳು ದಂಡವನ್ನು ವಸೂಲಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಉಪವಿಭಾಗದಲ್ಲಿ 269 ದ್ವಿಚಕ್ರ,03 ತ್ರಿಚಕ್ರ ಹಾಗೂ 26 ಫೋರ್ ವ್ಹೀಲರ್ ವಾಹನಗಳನ್ನು ಜಪ್ತಿ ಮಾಡಿ 38 ಕೇಸುಗಳನ್ನು ದಾಖಲಿಸಿ 84 ಸಾವಿರ 200 ರೂಗಳ ದಂಡವನ್ನು ವಿಧಿಸಲಾಗಿದೆ ಚಿಂತಾಮಣಿ ಉಪ ವಿಭಾಗದಲ್ಲಿ 98 ದ್ವಿಚಕ್ರ ವಾಹನಗಳು,18 ಫೋರ್ ವ್ಹೀಲರ್ ವಾಹನಗಳನ್ನು ಜಪ್ತಿ ಮಾಡಿ 23 ಕೇಸುಗಳನ್ನು ದಾಖಲಿಸಿ 15800 ರೂಗಳನ್ನು ದಂಡ ವಸೂಲಿ ಮಾಡಲಾಗಿದೆ.
ಕೋಟ್: ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಆದರೇ ಜನ ಅನಗತ್ಯವಾಗಿ ಮನೆಯಿಂದ ಹೊರ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾದ್ಯಂತ ಒಂದು ವಿಶೇಷ ಅಭಿಯಾನ ನಡೆಸಿ 414 ವಾಹನಗಳನ್ನು ಜಪ್ತಿ ಮಾಡಿ 1 ಲಕ್ಷ ರೂಗಳ ದಂಡ ವಸೂಲಿ ಮಾಡಲಾಗಿದೆ ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ಸ್ವಯಂ ನಿರ್ಭಂಧಿಸಿಕೊಂಡು ಜಿಲ್ಲೆಯನ್ನು ಕೊರೊನಾ ಸೋಂಕು ಮುಕ್ತ ಮಾಡಲು ಸಹಕರಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.