Advertisement

ಚಿಕ್ಕಬಳ್ಳಾಪುರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಐದು ಲಕ್ಷ ನಗದು ವಶ

09:53 AM Nov 12, 2019 | sudhir |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಗಿ ಸೋಮವಾರದಿಂದ ಮಾದರಿ ನೀತಿ ಸಂಹಿತೆ ಜಾರಿಯಾದ ಬೆನ್ನಲೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಐದು ಲಕ್ಷ ನಗದನ್ನು ಚುನಾವಣೆ ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿ ಜಪ್ತಿ ಮಾಡಿದೆ.

Advertisement

ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಚದಲುಪುರ ಚೆಕ್ ಪೋಸ್ಟ್‌ ನಲ್ಲಿ ವಾಹನಗಳ ತಪಾಸಾಣೆ ವೇಳೆ ಕಾರಿನಲ್ಲಿದ್ದ ಎರಡು ಸಾವಿರ ರೂ ಮುಖ ಬೆಲೆಯ ಒಟ್ಟು ಐದು ಲಕ್ಷ ರೂ ಮೌಲ್ಯದ ಹಣ ಕಟ್ಟುಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು SST ತಂಡದ ಮುಖ್ಯಸ್ಥರಾದ ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next