ಚಿಕ್ಕಬಳ್ಳಾಪುರದ ಆವಲಗುರ್ಕಿಯಲ್ಲಿ ಭವ್ಯವಾದ “ಆದಿಯೋಗಿ’ ಪ್ರತಿಮೆ ರವಿವಾರ ಲೋಕಾರ್ಪಣೆಗೊಳ್ಳಲಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿ ಯಲ್ಲಿ ಕಾರ್ಯ ಕ್ರಮ ನಡೆಯಲಿದೆ.ಕೊಯ ಮತ್ತೂರಿನ ಆದಿಯೋಗಿಯನ್ನೇ ಹೋಲುವ ಈ ಪ್ರತಿಮೆಯನ್ನು ಸದ್ಗುರು ಜಗ್ಗಿ ವಾಸುದೇವ ಅವರ ಈಶಾ ಪ್ರತಿಷ್ಠಾನ ಸ್ಥಾಪಿಸಿದೆ.
ಬೇರೇನಿರಲಿದೆ?
ಈಗಾಗಲೇ ಅಂದರೆ 2022ರ ಅಕ್ಟೋಬರ್‌ನಲ್ಲಿ ನಾಗಪ್ರತಿಷ್ಠೆ ನಡೆದಿದೆ. ಆದಿಯೋಗಿ ಪ್ರತಿಮೆಯ ಬಳಿಯೇ ಯೋಗೇಶ್ವರ ಲಿಂಗ ಪ್ರತಿಷ್ಠಾಪನೆಯಾಗಲಿದೆ.ಸನ್ನಿಧಿಯಲ್ಲಿ “ಲಿಂಗ ಭೈರವಿ’ ದೇವಾಲಯ ಮತ್ತು 2″ತೀರ್ಥಕುಂಡ’ಗಳಿರಲಿವೆ.
ಆದಿಯೋಗಿ ದಿವ್ಯ ದರ್ಶನಂ
ಅನಾವರಣದ ಬಳಿಕ “ಆದಿಯೋಗಿ ದಿವ್ಯ ದರ್ಶನಂ’ ಎಂಬ ಹೆಸರಿನಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನ ನಡೆಯಲಿದೆ. ಈಶಾ ಸಂಸ್ಕೃತಿ ವಿದ್ಯಾರ್ಥಿಗಳು ಹಾಗೂ ಸೌಂಡ್ಸ್ ಆಫ್ ಈಶಾದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ.
ಉಪಸ್ಥಿತಿ- ಈಶಾ ಪ್ರತಿಷ್ಠಾನದ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮತ್ತಿತರ ಗಣ್ಯರು.
Related Articles
ಮಕರ ಸಂಕ್ರಾಂತಿಯ ದಿನ ಜ.15 ರಂದು ಆದಿಯೋಗಿಯ ಮುಖ ಪ್ರತಿಮೆಯ ಅನಾವರಣ ನಡೆಯಲಿದೆ. ನೀವೆಲ್ಲರೂ ಇದರಲ್ಲಿ ಭಾಗವಹಿಸಿ ಆದಿಯೋಗಿಯ ದರ್ಶನ ಮಾಡಿ, ಆಶೀರ್ವಾದ ಪಡೆದುಕೊಳ್ಳಿ.
– ಸದ್ಗುರು
ಜಗ್ಗಿ ವಾಸುದೇವ್,
ಈಶಾ ಸಂಸ್ಥಾಪಕ