Advertisement

ಚಿಕ್ಕಬಳ್ಳಾಪುರ : ಸಾಲ ಬಾದೆ ತಾಳಲಾರದೆ ರೈತ ಆತ್ಮಹತ್ಯೆ

09:53 AM Sep 02, 2019 | Team Udayavani |

ಚಿಕ್ಕಬಳ್ಳಾಪುರ : ಇತ್ತೀಚಿಗೆ ಅಷ್ಟೆ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಸಾಲ ಭಾಧೆಯಿಂದ ರೈತರೊಬ್ಬರು ಅತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಭಾನುವಾರ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ದಲ್ಲಿ ಭಾನುವಾರ ರೈತ ಸಾಲ ಭಾದೆಗೆ ತಾಳಲಾರದೇ ವಿಷ ಕುಡಿದು ಅತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಸಾಲಭಾದೆಗೆ ಅತ್ಮಹತ್ಯೆಗೆ ಶರಣಾದ ರೈತನನ್ನು ಶಿಡ್ಲಘಟ್ಟ ತಾಲೂಕಿನ ಮಾಳಮಾಚನಹಳ್ಳಿ ಗ್ರಾಮದ ನಂಜೇಗೌಡ (೫೩) ಎಂದು ಗುರುತಿಸಲಾಗಿದೆ.

ತಮ್ಮ ತೋಟದಲ್ಲಿ ಸಂಜೆ ೪ ಗಂಟೆ ಸುಮಾರಿನಲ್ಲಿ ಕ್ರಿಮಿ ನಾಶಕ್ಕೆ ಬಳಸುವ ವಿಷ ಕುಡಿದಿದ್ದು ಅಕ್ಕಪಕ್ಕದವರು ನೋಡಿಕೊಂಡು ತಕ್ಷಣವೇ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಗೆ ತಂದು ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಂಜೇಗೌಡ ಅಸುನೀಗಿದ್ದಾರೆ.

ಇತ್ತೀಚೆಗೆ ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಣಾಮ ರೈತರ ಕೊಳವೆ ಬಾವಿಗಳು ಕೈ ಕೊಡುತ್ತೀರುವುದು ಒಂದಡೆಯಾದರೆ ಬೆಳೆದ ಬೆಳೆಗಳಿಗೂ ಬೆಲೆ ಸಿಗದೇ ಕೈ ಸಾಲದ ಜೊತೆಗೆ ಬ್ಯಾಂಕ್ ಸಾಲ ತೀರಿಸಲಾಗದೇ ರೈತರು ಆತ್ಮಹತ್ಯೆಯ ಹಾದಿ ಹಿಡಿದಿರುವುದು ತೀವ್ರ ಆತಂಕ ಉಂಟು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next