Advertisement

Chikkaballapur: ಪೋಕ್ಸೋ ಆರೋಪಿ ಜತೆಗೆ 16 ವರ್ಷದ ಬಾಲಕಿ ಆತ್ಮಹತ್ಯೆ!

01:52 AM Sep 15, 2024 | Team Udayavani |

ಚಿಕ್ಕಬಳ್ಳಾಪುರ: ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಯುವಕ ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀರಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.

Advertisement

ಚಿಂತಾಮಣಿ ತಾಲೂಕಿನ ಇರಗಂಪಲ್ಲಿ ಸಮೀಪದ ನವೀನ್‌ (22) ಮತ್ತು 16 ವರ್ಷದ ಬಾಲಕಿ ಮೃತಪಟ್ಟವರು. ಈ ಹಿಂದೆಯೇ ನವೀನ್‌ ವಿರುದ್ಧ ಬಾಲಕಿಯ ಪಾಲಕರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರಿಂದ ಬಟ್ಲಹಳ್ಳಿ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next