ದೇವನಹಳ್ಳಿ: ಮೀನುಗಾರರು ಆರ್ಥಿಕವಾಗಿ ಮುಂದೆ ಬರಲು ಮೀನು ಸಾಕಾಣಿಕೆ ಮತ್ತು ಮಾರಾಟಕ್ಕೆ ಸಹಕಾರ ಸಂಘಗಳ ಮೂಲಕ ಮೀನುಗಾರರಿಗೆ ಆರ್ಥಿಕ ಚೈತನ್ಯ ನೀಡಲಾಗುತ್ತಿದೆ ಎಂದು ಬೆಂಗಳೂರು ವಲಯದ ಜಂಟಿ ನಿರ್ದೇಶಕ ಚಿಕ್ಕವೀರನಾಯಕ್ ಹೇಳಿದರು.
ತಾಲೂಕಿನ ಗೋಕರೆ ಕೆರೆಯಲ್ಲಿ ಜಿಲ್ಲಾ ಮೀನುಗಾರಿಕೆ ಇಲಾಖೆ ವತಿಯಿಂದ ಹಮ್ಮಿ ಕೊಂಡಿದ್ದ ಹಿಂದುಳಿದ ವರ್ಗ ಗಂಗಪುತ್ರ ಮೀನು ಸಾಕಾಣಿಕೆ ಮತ್ತು ಮಾರಾಟ ಸಹಕಾರ ಸಂಘದ ಸದಸ್ಯರಿಗೆ ಮೀನುಗಾರಿಕೆ ಬಲೆ ಪರೀಕ್ಷೆ ಸೇರಿದಂತೆ ಇತರೆ ಕಾರ್ಯಾಗಾರದಲ್ಲಿ ಮಾತನಾಡಿದರು. 2013ರಲ್ಲಿ ಸರ್ಕಾರವು ಮೀನುಗಾರರ ಸಹಕಾರ ಸಂಘಗಳ ಮೂಲಕ ಕೌಶಲ್ಯ ತರಬೇತಿ ಹಾಗೂ ಮೀನು ಮರಿಗಳನ್ನು ನೀಡಿ ಒಂದೊಂದು ಕೆರೆಗಳನ್ನು ಸಹಕಾರ ಸಂಘಗಳ ಮೂಲಕ ಅರ್ಹ ಮೀನುಗಾರರಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ:- ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು
ಬಡ ಮೀನುಗಾರರು ಮೀನು ಮಾರಾಟ, ಮೀನು ಹಿಡಿದು ಸಾಗಾಣಿಕೆ ಮಾಡುವುದು. ಹೀಗೆ ಹಲವಾರು ರೀತಿ ಮುಂದೆಬರಲು ಇಲಾಖೆ ಮಾಡುತ್ತಿದೆ. ಎಂಟು ಪರೀಕ್ಷೆಗಳನ್ನು ಸಹಕಾರ ಸಂಘಗಳು ಮಾಡುವವರಿಗೆ ನೀಡಲಾಗುತ್ತಿದೆ. ಅದರಲ್ಲಿ ಐದು ಪರೀಕ್ಷೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಮೂರು ಪರೀಕ್ಷೆಗಳನ್ನು ಮಾಡಿ ಉತ್ತೀರ್ಣರಾದವರಿಗೆ ಸಂಘದ ಮಾನ್ಯತೆ ಸಿಗಲಿದೆ. ನಂತರ ಸಹಕಾರ ಇಲಾಖೆಗೆ ಕಳುಹಿಸಿಕೊಡಲಾಗುವುದು.
ಜಿಲ್ಲೆಯಲ್ಲಿ ಇದು ಮೂರನೇ ಸಂಘವಾಗಿದೆ. ಮೀನು ಪೌಷ್ಟಿಕ ಅಂಶಯುಕ್ತ ಆಹಾರವಾಗಿದೆ. ಗುಣಮಟ್ಟದ ಮೀನು ಸಿಗಲು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು. ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕ ನಾಗರಾಜ್ ಮಾತನಾಡಿ, ಕೃಷಿ ಹೊಂಡಗಳಲ್ಲಿ 250 ಮರಿಗ ಳನ್ನು ಸಾಕಲು ಅವಕಾಶ ಮಾಡಿಕೊಡಲಾಗುತ್ತಿದೆ. ಹೊಸಕೋಟೆಯಲ್ಲಿ ಒಂದು ಸಂಘ ಇದೆ. ಮೀನು ಕೃಷಿ ಮಾಡಲು ಕೆರೆ ನೀಡಲಾಗುತ್ತಿದೆ.
ಒಂದು ಸಹಕಾರ ಸಂಘದಲ್ಲಿ ಮೂವತ್ತು ಜನ ಸದಸ್ಯರು ಇರುತ್ತಾರೆ. ಅವರಿಗೆ ಕೌಶಲ್ಯ ಪರೀಕ್ಷೆ ಉತ್ತೀರ್ಣರಾದವರಿಗೆ ನೋಂದಣಿಯನ್ನು ಸಹಕಾರ ಸಂಘದ ಮೂಲಕ ಮಾಡಿಸಲಾಗುತ್ತದೆ ಎಂದು ತಿಳಿಸಿದರು. ಯಲಿಯೂರು ಗ್ರಾಪಂ ಅಧ್ಯಕ್ಷ ಸೊಣ್ಣೇಗೌಡ, ಸದಸ್ಯೆ ಪ್ರಿಯಾಂಕ ಮೋಹನ್, ಮೀನುಗಾರಿಕೆ ಇಲಾಖೆಯ ಸಹಾ ಯಕ ನಿರ್ದೇಶಕಿ ಮಿಲನ ಭರತ್, ಬೆಸ್ತ ಸಂಘದ ಮಾಜಿ ಅಧ್ಯಕ್ಷ ಆಂಜಿನಪ್ಪ ಇತರರು ಇದ್ದರು.