Advertisement

32 ಗ್ರಾಪಂ ಚುನಾವಣೆ ಶಾಂತಿಯುತ

02:51 PM Mar 30, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅವಧಿ ಮುಗಿದಹಾಗೂ ವಿವಿಧ ಕಾರಣಾಂತರದಿಂದ ಚುನಾವಣೆ ನಡೆಯದೆ ಇದ್ದ ಗ್ರಾಪಂಗಳಿಗೆ ಚುನಾವಣೆ ಪ್ರಕ್ರಿಯೆ ಸೋಮವಾರ ನಡೆಯಿತು.

Advertisement

32 ಗ್ರಾಪಂನ 663 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದರು.ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮತದಾನ ಪ್ರಕ್ರಿಯೆ ನಡೆದು ಮತದಾರರು ಸರತಿ ಸಾಲಿನಲ್ಲಿನಿಂತು ಮತ ಚಲಾಯಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆಯಿಂದ ಭದ್ರತೆ ಕೈಗೊಳ್ಳಲಾಗಿತ್ತು.ಬಿಸಿಲ ಬೇಗೆಯ ನಡುವೆ ಮತಕೇಂದ್ರಗಳಲ್ಲಿಚೀಟಿ ಹಿಡಿದು ಸಾಲಾಗಿ ನಿಂತ ಮತದಾರರುತಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.

ಶನಿವಾರವೇ ಮತಕೇಂದ್ರಗಳಿಗೆ ತೆರಳಿಸಿ ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿ ಮತದಾರರ ಪಟ್ಟಿ ಪರಿಶೀಲನೆ ನಡೆಸಿಕೋವಿಡ್‌ ಮುಂಜಾಗ್ರತೆ ಕೈಗೊಂಡ ಬಳಿಕಮತದಾನ ಪ್ರಕ್ರಿಯೆಗೆ ಅವಕಾಶ ನೀಡಿದರು.ಗ್ರಾಪಂ ಚುನಾವಣೆಗೆ ಜಿಲ್ಲೆಯಲ್ಲಿ 146 ಮತಕೇಂದ್ರಗಳನ್ನು ತೆರೆಯಲಾಗಿದ್ದು 685 ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದರು.

ಅವಧಿ ಮುಗಿದ ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆಗ್ರಾಪಂಗಳ 38,564 ಮಂದಿ ಮತದಾರರುಮತ ಚಲಾಯಿಸಿದರು. ಶೇ.81.42ರಷ್ಟುಮತದಾನವಾದರೆ ವಿವಿಧ ಕಾರಣಗಳಿಂದಚುನಾವಣೆ ನಡೆಯದೇ ಬಾಕಿ ಉಳಿದಿದ್ದಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆಹಾಗೂ ಎನ್‌.ಆರ್‌. ಪುರ ತಾಲೂಕಿನ ಗ್ರಾಪಂನ31215 ಮತದಾರರು ಮತ ಚಲಾಯಿಸಿದರು.ಶೇ. 77.22ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next