Advertisement
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಮತ್ತು ಖಾಸಗಿ ತಜ್ಞವೈದ್ಯರ ಸಭೆ ನಡೆಸಿ ಮಾತನಾಡಿದ ಅವರು, 3ನೇ ಅಲೆ ನಿಯಂತ್ರಿಸಲು ಕೋವಿಡ್ ಮಾರ್ಗಸೂಚಿ, ಆಸ್ಪತ್ರೆ ಸೌಲಭ್ಯಗಳ ಕುರಿತು ತಜ್ಞರ ಸಮಿತಿ ನೇಮಿಸಿದ್ದು, ಕಾಲಕಾಲಕ್ಕೆ ವರದಿ ನೀಡುವಂತೆ ಸರ್ಕಾರ ಮತ್ತು ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೇಳಿದರು.
Related Articles
Advertisement
ಸಾರ್ವಜನಿಕರಲ್ಲಿ ಅರಿವು ಮೂಡಿಸಲು ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡಬೇಕು. ಕೋವಿಡ್ 3ನೇ ಅಲೆ ಎರಡು ತಿಂಗಳು ಮೂರು ತಿಂಗಳಲ್ಲಿ ಬರುತ್ತದೆ. ಅದು ಮಕ್ಕಳಿಗೆ ಅಪಾಯ ಉಂಟು ಮಾಡುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದು ಶುದ್ಧಸುಳ್ಳು, ಮುಂದಿನ ಮಾರ್ಚ್ ಅಂತ್ಯಕ್ಕೆ ಬರಬಹುದು ಬಾರದೇ ಇರಬಹುದು.
ಅಗತ್ಯ ಮೂಲ ಸೌಲಭ್ಯ ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದು ಎಂದು ಡಾ|ರಾಜು ತಿಳಿಸಿದರು. ಮಕ್ಕಳಿಗೆ ಜ್ವರ ಬಂದರೆ ಆಸ್ಪತ್ರೆಗೆ ತೋರಿಸಲು ಬರುತ್ತಾರೆ. ಮನೆಗೆ ಹೋದ ಮೇಲೆ ದೂರವಾಣಿ ಕರೆಮಾಡಿ ತಮಗೂ ಸೋಂಕು ತಗುಲಿರುವ ಬಗ್ಗೆ ಪೋಷಕರು ತಿಳಿಸುತ್ತಾರೆ. ಲಸಿಕೆ ಹಾಕಿಕೊಳ್ಳಬೇಕು. ಇದರೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ ಎಂದು ವೈದ್ಯ ರಮೇಶ್‌ಕುಮಾರ್ ಹೇಳಿದರು. ಕಲ್ಮನೆಯಲ್ಲಿ 50ರಿಂದ60 ಮಕ್ಕಳಿಗೆ ಚಿಕಿತ್ಸೆ ನೀಡುವಷ್ಟು ಸ್ಥಳವಕಾಶವಿದೆ.
ಅಲ್ಲಿ ಚಿಕಿತ್ಸೆ ಮುಂದುವರಿಸಬಹುದಾಗಿದೆ. 3ನೇಅಲೆ ಸೂಕ್ಷ್ಮವಾಗಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರಿ ವೈದ್ಯರೊಂದಿಗೆ ಖಾಸಗಿ ವೈದ್ಯರು ಕೈ ಜೋಡಿಸುವುದಾಗಿ ತಿಳಿಸಿದರು. ಸಾರ್ವಜನಿಕರಲ್ಲಿ ಸೋಂಕಿನ ಬಗ್ಗೆ ಭಯಹುಟ್ಟಿಸಬಾರದು. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯಿಂದ ಸೋಂಕು ತಗುಲದಂತೆ ನಮ್ಮನ್ನು ಕಾಪಾಡಿಕೊಳ್ಳಬಹುದು.
ಮಕ್ಕಳಿಗೆ ಸೋಂಕು ತಗುಲಿದರೇ ಪೋಷಕರು ಎಚ್ಚರ ವಹಿಸಬೇಕು. ಕೆಲವು ಮಕ್ಕಳು ಮಾಸ್ಕ್ ಧರಿಸಲು ಖುಷಿಪಡುತ್ತಾರೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದಾಗ ಕಾಟೂìನ್ ಚಿತ್ರವಿರುವ ಮಾಸ್ಕ್ ತಯಾರಿಸಿದರೇ ಮಕ್ಕಳು ಖುಷಿಯಿಂದ ಧರಿಸುತ್ತಾರೆ ಎಂದು ಸಲಹೆ ನೀಡಿದರು.
ಡಾ|ಪ್ಯಾಟ್ರಿಕ್, ಡಾ|ನಿಯತ್, ಡಾ|ರಾಜು, ಡಾ|ರಮೇಶ್‌ಕುಮಾರ್, ಡಾ|ಚಂದ್ರಶೇಖರ್ ಸಾಲಿಮಠ, ಹರಿದರ್ಶನ್, ಬಾಳೆಹೊನ್ನೂರು ಡಾ|ರಮೇಶ್, ಡಾ|ರಾಮಕೃಷ್ಣ, ಡಾ|ಅಶ್ವಿನಿ, ಎಸ್‌ಪಿ ಎಚ್.ಎಂ.ಅಕ್ಷಯ್, ಡಾ|ಅಶ್ವತ್‌ಬಾಬು, ಡಾ|ಉಮೇಶ್ ಉಪಸ್ಥಿತರಿದ್ದರು.