Advertisement

ಕಾಮಗಾರಿ ಅಂತ್ಯಕ್ಕೆ ಮೇ ಗಡುವು

06:40 PM Apr 16, 2021 | Team Udayavani |

ಚಿಕ್ಕಮಗಳೂರು: ಯು.ಜಿ.ಡಿ. ಮತ್ತು ಅಮೃತ್‌ ಯೋಜನೆಗೆ ಸಂಬಂಧಿ ಸಿದ ಎಲ್ಲಾ ಸಿವಿಲ್‌ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿ ಕಾರಿಗಳಿಗೆ ಶಾಸಕ ಸಿ.ಟಿ. ರವಿ ಗಡುವು ನೀಡಿದರು.

Advertisement

ಗುರುವಾರ ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬಸವನಹಳ್ಳಿ ಕೆರೆಗೆ ಸಂಬಂ ಧಿಸಿದಂತೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಗೆ ಸಂಬಂ ಧಿಸಿದಂತೆ ಒಳಚರಂಡಿ ವ್ಯವಸ್ಥೆ, ರಸ್ತೆ ಅಗಲೀಕರಣದಂತಹ ಕಾಮಗಾರಿಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಕಾಮಗಾರಿ ಪೂರ್ಣಗೊಳ್ಳದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಮೃತ್‌ ಯೋಜನೆಯ ನಿರ್ಮಾಣದ ಸಂದರ್ಭದಲ್ಲಿ ಕಲ್ಯಾಣ ನಗರ, ಉಪ್ಪಳ್ಳಿ, ಗೌರಿ ಕಾಲುವೆ ಮುಂತಾದ ಸ್ಥಳಗಳಲ್ಲಿ ರಸ್ತೆ ದುರಸ್ತಿಗೊಂಡಿದ್ದು, ಅವುಗಳನ್ನು ಅತೀ ಶೀಘ್ರವಾಗಿ ಸರಿಪಡಿಸಲು ಕ್ರಮ ಕೈಗೊಳ್ಳಿ ಎಂದು ಅ ಧಿಕಾರಿಗಳಿಗೆ ಸೂಚಿಸಿದರು. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ವಿವಿಧ ಕಾಮಗಾರಿಗಳಿಗಾಗಿ ಸುಮಾರು 152 ಕೋಟಿ ರೂ. ಮುಂಜೂರು ಮಾಡಲಾಗಿದ್ದು, ರತ್ನಗಿರಿ ಪಾರ್ಕ್‌, ಮಹಾತ್ಮ ಗಾಂಧಿ ಪಾರ್ಕ್‌ ಹಾಗೂ ಪ್ರವಾಸಿ ಸ್ಥಳಗಳ ರಸ್ತೆ ನಿರ್ಮಾಣ ಮತ್ತು ಪ್ರವಾಸಿ ಸ್ಥಳಗಳ ಕಾಮಗಾರಿಗಳ ಯೋಜನೆಗಳಿಗೆ ಸಂಬಂಧಿ ಸಿದ ಪ್ರಗತಿ ವಿವರಗಳನ್ನು ನೀಡಲಾಗುವುದು ಎಂದು ಹೇಳಿದರು.

2020-21ನೇ ಆರ್ಥಿಕ ಸಾಲಿನಲ್ಲಿ ಬಸವನಹಳ್ಳಿ ಕೆರೆಯ ಅಭಿವೃದ್ಧಿಗೆ ಸಂಬಂಧಿ ಸಿದ ಟೆಂಡರ್‌ ಕರೆಯಲಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ದೊರೆತ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದ ಅವರು, ಎ.ಐ.ಟಿ ಸರ್ಕಲ್‌ ನಿಂದ ಹಿರೇಮಗಳೂರು ಸರ್ಕಲ್‌ನ ಬೈಪಾಸ್‌ ರಸ್ತೆವರೆಗೆ 22ಮೀ ಅಗಲದ ರಸ್ತೆ ಅಗಲೀಕರಣದ ಜೊತೆಗೆ ರಸ್ತೆಯ ಮಧ್ಯದಲ್ಲಿ ಡಿವೈಡರ್‌ ಮತ್ತು ಲೈಟ್‌ ಗಳನ್ನು ಅಳವಡಿಸಲಾಗುವುದು ಎಂದರು. ಕೇಂದ್ರ ಸರ್ಕಾರದ ಸಹಯೋಗದಲ್ಲಿ 11.50 ಕೋಟಿ ರೂ. ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಸಿಂಥೆಟಿಕ್‌ ಟ್ರಾಕ್‌ ನಿರ್ಮಾಣ ಮಾಡಲು ಟೆಂಡರ್‌ ಕರೆಯಲಾಗು ವುದು ಎಂದ ಅವರು, ಮನೆ- ಮನೆ ಸಂಪರ್ಕಕ್ಕೆ ಟೆಂಡರ್‌ ಕಾಮಗಾರಿಗಳು ಬಾಕಿ ಉಳಿದಿದ್ದು ಪೂರ್ಣ ಟೆಂಡರ್‌ ಕರೆಯಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌ ಮಾತನಾಡಿ, ಅಭಿವೃದ್ಧಿ ಕಾಮಗಾರಿಯಲ್ಲಿ ಬದಲಾವಣೆಗಳಿದ್ದರೆ ಟೆಂಡರ್‌ ಕರೆಯುವ ಮುಂಚೆಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು . ಮಳೆಗಾಲ ಶುರುವಾಗುವ ಮೊದಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಅಧಿ ಕಾರಿಗಳಿಗೆ ಸೂಚಿಸಿದರು. ಪ್ರವಾಸೋದ್ಯಮ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದಲ್ಲಿ ಕಾಮಗಾರಿಗಳನ್ನು ನಿಗ ತ ಸಮಯದೊಳಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಬಿ.ಆರ್‌.ರೂಪ ಸೇರಿದಂತೆ ವಿವಿದ ಇಲಾಖೆಯ ಅ ಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next