Advertisement

Chikkaballapur; ಮುಖ್ಯಮಂತ್ರಿಗಳು ಡಿನ್ನರ್ ಪಾರ್ಟಿಗಳಿಂದ ಹೊರ ಬಂದು ಬರ ನೋಡಲಿ: ಸಿ.ಟಿ ರವಿ

01:28 PM Nov 05, 2023 | Team Udayavani |

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿಗಳು ಬ್ರೇಕ್ ಫಾಸ್ಟ್ ಹಾಗೂ ಡಿನ್ನರ್ ಪಾರ್ಟಿಯಿಂದ ಹೊರ ಬಂದು ಬರ ಪರಿಸ್ಥಿತಿ ನೋಡಲಿ ಎಂದು ಬಿಜೆಪಿ ‌ನಾಯಕ ಸಿ.ಟಿ.ರವಿ ಒತ್ತಾಯಿಸಿದರು.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ ಭಾನುವಾರ ಬಿಜೆಪಿ ಪಕ್ಷದ ತಂಡದಿಂದ ಬರ ಅಧ್ಯಯನ ನಡುವೆ ಸುದ್ದಿಗೋಷ್ಡಿ ನಡೆಸಿ ಮಾತನಾಡಿದರು.

ರಾಜ್ಯದ ಖಜಾನೆಯನ್ನು ಜನರಿಗೆ ಬಳಸದೆ ಪಕ್ಷದ ಖಜಾನೆ ತುಂಬಿಸಲು ಹೊರಟಿದ್ದಾರೆಂದು ಗಂಭೀರ ಆರೋಪಿ ಮಾಡಿದರು.

ಒಬ್ಬರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ ಮತ್ತೊಬ್ಬರು ಕುರ್ಚಿ ಗಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ರೈತರಿಗೆ ಸ್ಪಂದಿಸದೆ ಹೋದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಿಎಂ ಹಂಪಿಯಲ್ಲಿ ನೃತ್ಯ ಚೆನ್ನಾಗಿ ಮಾಡಿದ್ದಾರೆ, ಅದು ತಪ್ಪಲ್ಲ, ಆದರೆ ಸಮಯ ಯಾವುದು ಎಂದು ಸಿ.ಟಿ.ರವಿ  ಪ್ರಶ್ನಿಸಿದರು. ಹಂಪಿಗೆ ಹೋದರೂ ಬರ ಅಧ್ಯಯನ ಮಾಡಲಿಲ್ಲ. ಒಂದು ಜನಪರ ಸರ್ಕಾರ ಹಾಗೂ ಮಾನವೀಯ ಸರ್ಕಾರ ಹೇಗೆ ನಡೆದುಕೊಳ್ಳಬೇಕು ಹಾಗೆ ನಡೆದುಕೊಳ್ಳದಿರುವುದು ದುರಂತ ಎಂದು ಸಿ.ಟಿ.ರವಿ ಟೀಕಿಸಿದರು. ಸರ್ಕಾರ ಹೈಕಮಾಂಡ್ ಸೂಚಿಸುವ ಎಲ್ಲಾ ನಿರ್ದೇಶನ ಪಾಲಿಸುತ್ತದೆ. ಆದರೆ ರೈತರ ವಿಚಾರದಲ್ಲಿ ಮೌನ ವಹಿಸುತ್ತದೆ ಎಂದರು.

Advertisement

ರಾಜ್ಯ ಸರ್ಕಾರ ತಾಳ ತಪ್ಪಿದೆ. ಸರ್ಕಾರ 135 ಶಾಸಕರ ಬೆಂಬಲ ಇದ್ದರೂ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ ಎಂದರು. ಸರ್ಕಾರದ ಖಜಾನೆ ಖಾಲಿ ಆಗಿದ್ದರೆ ಸರ್ಕಾರ ಒಪ್ಪಿಕೊಳ್ಳಲಿ ಎಂದರು. ಜನರ ಸಂಕಷ್ಟದ ನಡುವೆ ನೃತ್ಯ ಮಾಡಿದರೆ ನಾವು ಏನು ಅಂದುಕೊಳ್ಳಬೇಕು, ಸರ್ಕಾರದ ಕೀಲಿ ಕೈ ಸುರ್ಜೆವೇಲಾ ಹಾಗೂ ವೇಣುಗೋಪಾಲ ಬಳಿ ಇದೆ ಎಂದರು.

ಮೈಸೂರು ದಸರಾದಲ್ಲಿ ಕಲಾವಿದರಿಗೆ ಕೊಟ್ಟ ಚೆಕ್ ಬೌನ್ಸ್ ಆಗಿದೆ. ಇತರೆ ರಾಜ್ಯಗಳ ಮುಂದೆ ರಾಜ್ಯದ ಜನತೆ ತಲೆ ತಗ್ಗಿಸಬೇಕಿದೆ. ಕಲಾವಿದರ ಬಳಿಯು ಲಂಚ ಕೇಳಿದೆ ಎಂದರು. ರೈತರಿಗೆ ನಿರಂತರ 7 ತಾಸು ವಿದ್ಯುತ್ ಕೊಡಬೇಕು, ರೈತರಿಗೆ ತಕ್ಷಣ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

135 ಸೀಟು ಇದ್ದು ನಿಮ್ಮನ್ನು ಯಾರು ಹೊರಗಡೆಯಿಂದ ಬೀಳಸಲ್ಲ. ನಾವು ಕೂಡ ಐದು ವರ್ಷ ನಾವು ಯಾರು ಸಿಎಂ ಕುರ್ಚಿ ಕೇಳಲ್ಲ ಎಂದರು. ಸರ್ಕಾರದ ವಿರುದ್ದ ನಮ್ಮ ಪಿತೂರಿ ಇಲ್ಲ ಎಂದರು.

ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ, ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಸಂಪಂಗಿ, ಎಂ.ರಾಜಣ್ಣ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಸೀಕಲ್ಲು ರಾಮಚಂದ್ರಗೌಡ, ವೇಣುಗೋಪಾಲ್ ಮತ್ತಿತರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next