Advertisement
ನಿಗದಿತವಾಗಿದ್ದಂತೆ ಅಪರಾಹ್ನ 2ಕ್ಕೆ ಮೂಡು ಬಿದಿರೆಗೆ ಬರಬೇಕಾಗಿದ್ದ ಬೊಮ್ಮಾಯಿ ಅವರು ಒಂದೂವರೆ ತಾಸು ಅನಿವಾರ್ಯ ವಿಳಂಬವಾಗಿ, ಹೆಲಿಕಾಪ್ಟರ್‌ನಲ್ಲಿ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಕ್ರೀಡಾಂಗಣದಲ್ಲಿ ಬಂದಿಳಿದಾಗ ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯಮಂತ್ರಿಯವರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ನೇರವಾಗಿ ಹತ್ತಿರದ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣಾಲಯಕ್ಕೆ ತೆರಳಿ, ಅಲ್ಲಿ ಶ್ವೇತ ಭವನ ಮಾದರಿಯ ‘ಅನ್ನದಾಸೋಹ ‘ ಕಟ್ಟಡವನ್ನು ಉದ್ಘಾಟಿಸಿದರು.
Related Articles
Advertisement
ಇದೇ ಸಂದರ್ಭ ಮುಖ್ಯಮಂತ್ರಿಯವರು ದರೆಗುಡ್ಡೆ ಮೆಟ್ರಿಕ್ ಅನಂತರದ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ, ಬನ್ನಡ್ಕದಲ್ಲಿ ನಿರ್ಮಾಣವಾಗಿರುವ ಮಂಗಳೂರು ವಿ.ವಿ. ಪದವಿ ಕಾಲೇಜು, ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಹೊರರೋಗಿ ವಿಭಾಗ, ಲೋಕೋಪಯೋಗಿ ಇಲಾಖೆಯಡಿ ವಿದ್ಯಾಗಿರಿಯಿಂದ ಸ್ವರಾಜ್ಯ ಮೈದಾನದವರೆಗೆ ದ್ವಿಪಥ, ರೋಟರಿ ಶಾಲೆ -ಮೆಸ್ಕಾಂ ಜಂಕ್ಷನ್ ಚತುಷ್ಪಥ ರಸ್ತೆ, ಪುತ್ತಿಗೆ ಗ್ರಾ. ಪಂ. ಕೊಡಿಪ್ಪಾಡಿ ಮತ್ತು ತೆಂಕಮಿಜಾರು ಗ್ರಾ.ಪಂ. ಉಳಾಯಂಗಡಿ ಬಳಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟುಗಳನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿಯವರು ಹಳೆಯಂಗಡಿ ಸರಕಾರಿ ಪ್ರ. ದ. ಕಾಲೇಜು ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ಮುಖ್ಯಮಂತ್ರಿಯವರ ಜತೆಗೆ ಸಚಿವರಾದ ವಿ. ಸುನಿಲ್‌ಕುಮಾರ್, ಅಂಗಾರ ಎಸ್., ಕೋಟ ಶ್ರೀನಿವಾಸ ಪೂಜಾರಿ, ವಿ. ಸೋಮಣ್ಣ, ಸಿ.ಸಿ. ಪಾಟೀಲ್, ಡಾ| ಅಶ್ವತ್ಥನಾರಾಯಣ ಸಿ.ಎನ್. ಡಾ| ಕೆ. ಸುಧಾಕರ್, ಬಿ.ಸಿ. ನಾಗೇಶ್ ಇವರು ಮುಖ್ಯ ಅತಿಥಿಗಳಾಗಿದ್ದರು.
ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ
ಜಲಜೀವನ್ ಮಿಷನ್ ಯೋಜನೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (145.48 ಕೋಟಿ ರೂ.), ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್ -ಇ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು (100.5ಕೋಟಿ), ಸಣ್ಣ ನೀರಾವರಿ ಇಲಾ ಖೆಯ ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ (73.23 ಕೋಟಿ), ಗ್ರಾಮೀಣಾಭಿವೃದ್ಧಿ ಹಾಗೂ ಪಂ.ರಾಜ್ ಇಲಾಖೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳು (ರೂ. 31 ಕೋಟಿ), ಮೂಲ್ಕಿ ತಾಲೂಕಿನ ಆಡಳಿತ ಸೌಧದ ಕಾಮಗಾರಿ (10 ಕೋಟಿ ರೂ.), ಮೂಡುಬಿದಿರೆಯಲ್ಲಿ ನೂತನ ಅಂಬೇಡ್ಕರ್ ಭವನ (6 ಕೋಟಿ ರೂ.), ಮುಜರಾಯಿ ಇಲಾಖೆಯಡಿ ದೇವಸ್ಥಾನ, ದೆ„ವಸ್ಥಾನಗಳ ಅಭಿವೃದ್ಧಿ (ರೂ. 2 ಕೋಟಿ), ಬೃಹತ್ ನೀರಾವರಿ ಇಲಾಖೆಯ ಕಾಮಗಾರಿಗಳು (ರೂ. 6 ಕೋಟಿ), ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾಮಗಾರಿ (0.50 ಕೋಟಿ) ಹೀಗೆ 374.71ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.