Advertisement

ಸತೀಶ್‌ಗೆ ವಾಲ್ಮೀಕಿ, ರಾಮಾಯಣದ ಮೇಲೆ ನಂಬಿಕೆ ಇದೆಯೇ?

12:06 AM Nov 10, 2022 | Team Udayavani |

ಬೆಳಗಾವಿ: ವಾಲ್ಮೀಕಿ ಸಮುದಾಯದ ಸತೀಶ ಜಾರಕಿಹೊಳಿ ಅವರಿಗೆ ವಾಲ್ಮೀಕಿ ಹಾಗೂ ಅವರು ರಚಿಸಿದ ರಾಮಾಯಣ ಮಹಾಗ್ರಂಥದ ಮೇಲೆ ನಂಬಿಕೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

Advertisement

ಖಾನಾಪುರದ ಮಲಪರಭಾ ಮೈದಾನದಲ್ಲಿ ಬುಧವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಶ್ರೀರಾಮನ ಸಹೋದರನ ಹೆಸರು ಲಕ್ಷ್ಮಣ. ನಿಮ್ಮ ಸಹೋದರನ ಹೆಸರೂ ಲಕ್ಷ್ಮಣ ಇದೆ. ಇದು ಹಿಂದೂ ಹೆಸರು ಎಂಬುದು ನಿಮಗೆ ಗೊತ್ತಾಗಲಿಲ್ಲವೇ? ವಾಲ್ಮೀಕಿ ಮತ್ತು ರಾಮಾಯಣ ಬಗ್ಗೆ ಸತೀಶರಿಗೆ ನಂಬಿಕೆ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದರು.

ಒಂದೆಡೆ ರಾಹುಲ್‌ ಗಾಂಧಿ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದರೆ, ಇನ್ನೊಂದೆಡೆ ಸತೀಶ ಜಾರಕಿಹೊಳಿ ಭಾರತ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಎಂಬುದು ಹೊಲಸು ಎಂದಿರುವ ಅವರ ಮನಸ್ಸು ಹಾಗೂ ಭಾವನೆಯೇ ಹೊಲಸಾಗಿದೆ. ಕಾಂಗ್ರೆಸ್‌ ವೇದಿಕೆ ಅಲ್ಲದಿದ್ದರೂ ಯಾವ ಸಭೆಯಲ್ಲಿ ಮಾತನಾಡಿದರೂ ವಿಚಾರ ಒಂದೇ. ಹಿಂದೂಗಳನ್ನು ಹೀಯಾಳಿಸಿ ಮಾತ ನಾಡಿದ್ದಾರೆ. ಹಿಂದೂಗಳ ನಂಬಿಕೆ, ಬದ್ಧತೆಗೆ ಧಕ್ಕೆ ತಂದಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಈ ತರಹದ ಮನಸ್ಥಿತಿ ಇರುವಂಥ ಪಕ್ಷ ಕಾಂಗ್ರೆಸ್‌ ನಮಗೆ ಬೇಡ. ನಮ್ಮ ನಂಬಿಕೆ ಬಗ್ಗೆ ಕಾಂಗ್ರೆಸ್‌ಗೆ ವಿಶ್ವಾಸ ಇಲ್ಲದಿದ್ದರೆ ನಮ್ಮನ್ನು ಆಳುವ ಅಧಿ ಕಾರವೂ ಕಾಂಗ್ರೆಸ್‌ಗೆ ಇಲ್ಲ. ನಮ್ಮ ನಂಬಿಕೆ ನಮಗೆ ಬಹಳ ಮುಖ್ಯ. ನಮ್ಮ ನಾಗರಿಕತೆ, ದೇಶ, ಸಂಸ್ಕಾರ, ಸಂಸ್ಕೃತಿ, ಇತಿಹಾಸ ಇರುತ್ತದೆ. ಇದರಿಂದ ಭವ್ಯ ಭವಿಷ್ಯ ಬರೆಯಬೇಕಾಗುತ್ತದೆ.
ಹೀಗಾಗಿ ಇಂಥ ಮನಸ್ಥಿತಿ ಇರುವ ಪಕ್ಷಕ್ಕೆ ಇನ್ನು ಮುಂದೆ ಅಧಿ ಕಾರ ನೀಡಬಾರದು ಎಂಬ ಸಂಕಲ್ಪ ಮಾಡಬೇಕಿದೆ ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಬಿಜೆಪಿಯ ಒಬ್ಬರೇ ಅಭ್ಯರ್ಥಿ ಆಗಲಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು 8-10 ಜನರಿದ್ದರೂ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Advertisement

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ಮರಾಠಾ ಸಮಾಜದ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾಜಿ ಶಾಸಕ ಮಾರುತಿ ಮೋರೆ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಟಿಕೆಟ್‌ ಆಕಾಂಕ್ಷಿಗಳಿಂದ
ಪ್ರತಿಜ್ಞೆ ಮಾಡಿಸಿದ ಸಿಎಂ
ಖಾನಾಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹಲವಾರು ಆಕಾಂಕ್ಷಿಗಳು ಇದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಕಮಲ ಅರಳಿಸಬೇಕು. ವಿಧಾಸಭೆಯಲ್ಲಿ ನಮ್ಮ ತಪ್ಪಿನಿಂದ ಬಿಜೆಪಿ ಸೋತಿದೆ. ಈ ಬಾರಿ ಬಿಜೆಪಿ ಗೆಲ್ಲಿಸಲು ಒಟ್ಟಾಗಬೇಕು ಎಂದು ಮುಖ್ಯಮಂತ್ರಿಗಳು, ಎಲ್ಲ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳನ್ನು ಕರೆಸಿ ಸಾಲಾಗಿ ನಿಲ್ಲಿಸಿ ಅವರಿಂದ ಒಗ್ಗಟ್ಟಿನ ಪ್ರತಿಜ್ಞೆ ಮಾಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next