Advertisement

ಆಡಳಿತ ಯಂತ್ರಕ್ಕೆ ಚುರುಕು, ಗುತ್ತಿಗೆ ವೈದ್ಯರ ವೇತನ ಏರಿಕೆ: ಅಧಿಕಾರಿಗಳ ಜೊತೆ BSY ಸಭೆ

08:05 AM Apr 24, 2020 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿರುವ ಅಂಶವನ್ನು ಪ್ರಧಾನವಾಗಿರಿಸಿಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದರು.

Advertisement

ಸುಮಾರು ನಾಲ್ಕು ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಸಭೆಯಲ್ಲಿ ರೈತರ ಬೆಳೆ ಸಮಸ್ಯೆ, ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ, ಲಾಕ್ ಡೌನ್ ನಡುವೆಯೂ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದರ ಕುರಿತಾಗಿ ಸುದೀರ್ಘವಾದ ಚರ್ಚೆಯನ್ನು ನಡೆಸಲಾಯಿತು.

ಕೊವಿಡ್ ಕಾರಣದಿಂದಾಗಿ ರೈತರು ಬೆಳೆದಿರುವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವ ಕಾರಣದಿಂದ ಅವುಗಳನ್ನು ಸರಕಾರವೇ ಖರೀದಿಸಿ ಕೋಲ್ಡ್ ಸ್ಟೋರೇಜ್ ನಲ್ಲಿರಿಸಿ ಬಳಿಕ ಮಾರಾಟ ಮಾಡುವ ನಿರ್ಧಾರವನ್ನು ಸಭೆ ಕೈಗೊಂಡಿತು. ಇನ್ನು ಹೆಚ್ಚು ದಿನ ಬಾಳಿಕೆ ಬರದಿರುವ ಹಣ್ಣು ಹಾಗೂ ತರಕಾರಿಗಳನ್ನು ಇತರೇ ರಾಜ್ಯಗಳಿಗೆ ಮತ್ತು ಹೊರದೇಶಗಳಿಗೆ ಕಳುಹಿಸಿ ಮಾರಾಟ ಮಾಡುವ ಕುರಿತಾಗಿ ಸಭೆ ತೀರ್ಮಾನಿಸಿತು.

ಇನ್ನು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿರುವ ಕಾರಣದಿಂದ ನೀರಿನ ಅಭಾವ ಇರುವ ಕಡೆ ತುರ್ತಾಗಿ ನೀರಿನ ಸರಬರಾಜು ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ವೈರಸ್ ಭೀತಿ ಇರುವ ಗ್ರಾಮಗಳಲ್ಲಿ ಗುಣಮಟ್ಟದ ನೀರನ್ನು ಸರಬರಾಜು ಮಾಡುವಂತೆಯೂ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೂಚನೆಯನ್ನು ನೀಡಿದರು. ಕೋವಿಡ್ ಸಂಬಂಧಿತ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಗೆ ಇನ್ನಷ್ಟು ಬಲ ತುಂಬಲು ನಿರ್ಧರಿಸಲಾಯಿತು.

Advertisement

ಕೋವಿಡ್ ಗಾಗಿ ಹಗಲಿರುಳೂ ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳವನ್ನು ಹೆಚ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಇತರೇ ಪ್ರಮುಖ ನಿರ್ಧಾರಗಳು

ನಗರಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸರ್ಕಾರಿ‌ ಜಾಗವನ್ನು ಲೀಸ್ ಗೆ ಪಡೆದು ಇದುವರೆಗು ಕೆಲಸ ಶುರು‌ ಮಾಡದೆ ಲೀಸ್ ಕಂಡಿಷನ್ ಉಲ್ಲಂಘನೆ‌ ಮಾಡಿದ ಜಾಗಗಳನ್ನು ಸರ್ಕಾರಕ್ಕೆ ವಾಪಸ್ ಪಡೆಯಲು ಸೂಚನೆ‌ ನೀಡಲಾಯಿತು

ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಡ್ಯಾಮ್ ಗಳಲ್ಲಿ ಹೆಚ್ಚು ನೀರು‌ ಸಂಗ್ರಹವಾಗಿದ್ದಾರೆ ಅದನ್ನು ರೈತರ ಬೆಳೆಗಳಿಗೆ‌‌ ಮತ್ತು‌ ಕುಡಿಯುವ ನೀರಿಗೆ ಹರಿಸಲು ಸೂಚನೆ‌ ನೀಡಲಾಯಿತು

ಕಳೆದ ವರ್ಷ ಆದ ಅನಾಹುತ ಮತ್ತೆ‌‌ ಮರುಕಳಿಸದಂತೆ ಡ್ಯಾಮ್ ಗಳಲ್ಲಿ ಪ್ರತಿನಿತ್ಯ ಲಭ್ಯವಿರುವ ನೀರಿನ‌ ಮಾಹಿತಿಯನ್ನು‌ ಪಡೆಯಲು ಸೂಚನೆ ನೀಡಲಾಯಿತು

ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೋವಿಡ್ ನಿಂದಾಗಿ ಅಂತರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗೋದರಿಂದ ದೇಶಿಯ ಪ್ರವಾಸಿಗರನ್ನು ಆಕರ್ಷಣೆ‌ ಮಾಡುವತ್ತ ಗಮನ ಹರಿಸಲು ಸೂಚನೆ ನೀಡಲಾಯಿತು

ಇದರ ಜೊತೆಗೆ ಅಲ್ಲಿ ಕೋವಿಡ್ ಇಲ್ಲ ಅನ್ನೋದನ್ನು‌ ಪ್ರವಾಸಿಗರಿಗೆ‌ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು ಅಂತ ಸೂಚನೆ‌ ನೀಡಲಾಯಿತು

ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಆನ್ ಲೈನ್ ತರಭೇತಿ ನೀಡಲು ಸೂಚನೆ‌ ನೀಡಲಾಯಿತು

ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಸೇರಿದಂತೆ ಇತರೆ ಚಟುವಟಿಕೆ ಗಳನ್ನು ಶಾಲೆ ತೆರೆಯುವವರೆಗು ಮಕ್ಕಳಿಗೆ ನೀಡಲು ಸೂಚನೆ‌ ನೀಡಲಾಯಿತು

ಸಾರಿಗೆ ಇಲಾಖೆಯಲ್ಲಿ‌ ಕೋವಿಡ್ ನಿಂದ ಬಸ್ ಸಂಚಾರ ಕಡಿಮೆ ಇರುವುದರಿಂದ ಕೆಎಸ್ ಅರ್ಟಿಸಿ ನೂರಾರು ಕೋಟಿ ನಷ್ಟ ದಲ್ಲಿದೆ . ಹಾಗಾಗಿ ಬಸ್ ಗಳನ್ನ ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಅದರ ಮೂಲಕ ಆದಾಯ ಪಡೆಯಲು ಸೂಚನೆ ನೀಡಲಾಯಿತು

ಖಾಸಿಗಿ‌ ಕಂಪನಿಗಳಿಗೆ ಬಸ್ ಗಳನ್ನು ಗುತ್ತಿಗೆ ಆದಾರದ ಮೇಲೆ ನೀಡಲು ತೀರ್ಮಾನ‌ ಮಾಡಲಾಯಿತು

ಕಲ್ಯಾಣ ಕರ್ನಾಟಕ ಮತ್ತು ಇತರೆ ಅಭಿವೃದ್ಧಿ ಮಂಡಳಿಗೆಳ ಭಾಗದಲ್ಲಿ ಭಾಗದಲ್ಲಿ ತುರ್ತಾಗಿ ಆಗಬೇಕಾಗಿರೋ ಕೆಲಸ ಕಾರ್ಯಗಳನ್ನು ಮಾಡಲು ಸೂಚನೆ ನೀಡಲಾಯಿತು (ಆಸ್ಪತ್ರೆ ಶಿಕ್ಷಣ ಕುಡಿಯುವ ನೀರು ಇತರೆ)

Advertisement

Udayavani is now on Telegram. Click here to join our channel and stay updated with the latest news.

Next