Advertisement

ನ.15ರೊಳಗೆ ಅಯೋಧ್ಯೆ ತೀರ್ಪು ಪ್ರಕಟ? ಉತ್ತರಪ್ರದೇಶ ಹಿರಿಯ ಅಧಿಕಾರಿಗಳ ಜತೆ ಸಿಜೆಐ ಭೇಟಿ

09:29 AM Nov 09, 2019 | Nagendra Trasi |

ನವದೆಹಲಿ:ಬಹು ನಿರೀಕ್ಷಿತ ಹಾಗೂ ದಶಕಗಳಷ್ಟು ಹಳೆಯದಾದ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂವಿವಾದದ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ನವೆಂಬರ್ 15ರೊಳಗೆ ಘೋಷಿಸುವ ಸಾಧ್ಯತೆ ಇದ್ದು, ಏತನ್ಮಧ್ಯೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯಿ ಅವರು ಉತ್ತರಪ್ರದೇಶದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆ ಕುರಿತು ಸಿಜೆಐ ಗೋಗೋಯಿ ಅವರು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿ ಮತ್ತು ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ್ ಸಿಂಗ್ ಅವರ ಜತೆ ಚರ್ಚೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.

ನವೆಂಬರ್ 17ರಂದು ಸಿಜೆಐ ರಂಜನ್ ಗೋಗೋಯಿ ಅವರು ನಿವೃತ್ತಿಯಾಗಲಿದ್ದು, ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ಕುರಿತ ಅಂತಿಮ ತೀರ್ಪನ್ನು ನ.15ರಂದು ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.

ಸುಪ್ರೀಂಕೋರ್ಟ್ ನ ಸಿಜೆಐ ರಂಜನ್ ಗೋಗೋಯಿ ಅವರ ನಿವೃತ್ತಿ ನಂತರ ಜಸ್ಟೀಸ್ ಎಸ್ ಎ ಬೋಬ್ಡೆ ನೂತನ ಸಿಜೆಐಯಾಗಲಿದ್ದಾರೆ. ಈಗಾಗಲೇ ತಮ್ಮ ಮುಂದಿನ ನೂತನ ಸಿಜೆಐ ಬೋಬ್ಡೆ ಅವರನ್ನು ನೇಮಕ ಮಾಡಬೇಕೆಂದು ಗೋಗೋಯಿ ಕೇಂದ್ರ ಗೃಹಸಚಿವಾಲಯಕ್ಕೆ ವಾಡಿಕೆಯಂತೆ ಶಿಫಾರಸ್ಸು ಮಾಡಿದ್ದಾರೆ.

ಸುಮಾರು 40 ದಿನಗಳ ಕಾಲ ಸುದೀರ್ಘವಾಗಿ 133 ವರ್ಷಗಳಷ್ಟು ಹಳೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ವಾದ, ಪ್ರತಿವಾದವನ್ನು ಆಲಿಸಿದ್ದ ಸಿಜೆಐ ರಂಜನ್ ಗೋಗೋಯಿ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next