ನವದೆಹಲಿ: ಸುಪ್ರೀಂಕೋರ್ಟ್ ನಲ್ಲಿ ಶುಕ್ರವಾರ(ಜನವರಿ 06) ಹಿರಿಯ ನ್ಯಾಯಾಧೀಶರು, ವಕೀಲರು ಅಚ್ಚರಿಗೊಳಗಾದ ಪ್ರಸಂಗ ನಡೆಯಿತು. ಅದಕ್ಕೆ ಕಾರಣ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ತಮ್ಮ ಇಬ್ಬರು ವಿಕಲಚೇತನ (ಸಾಕು ಮಕ್ಕಳು) ಪುತ್ರಿಯರ ಜೊತೆ ಕೋರ್ಟ್ ಗೆ ಆಗಮಿಸಿರುವುದು.
ಇದನ್ನೂ ಓದಿ:ಬೆಂಗಳೂರಿನ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ: ಸ್ಥಳಕ್ಕೆ ದೌಡಾಯಿಸಿದ ಪೊಲೀಸರು
ಇಂದು ಬೆಳಗ್ಗೆ 10ಗಂಟೆಗೆ ಸುಪ್ರೀಂಕೋರ್ಟ್ ಆವರಣ ಪ್ರವೇಶಿಸಿದ್ದ ಸಿಜೆಐ ಚಂದ್ರಚೂಡ್ ಅವರು ಸಾರ್ವಜನಿಕ ಗ್ಯಾಲರಿಯಿಂದ ತಮ್ಮ ಇಬ್ಬರು ವಿಕಲಚೇತನ ಪುತ್ರಿಯರ ಜತೆ ಕೋರ್ಟ್ ರೂಂಗೆ ಪ್ರವೇಶಿಸಿದ್ದರು.
Related Articles
ಇಬ್ಬರು ಪುತ್ರಿಯರನ್ನು ಕೊಠಡಿ ಸಂಖ್ಯೆ 1ರಲ್ಲಿದ್ದ ಸಿಜೆಐ ಕೋರ್ಟ್ ಗೆ ಕರೆದೊಯ್ದು ನ್ಯಾಯಾಲಯದ ಕಾರ್ಯವೈಖರಿಯನ್ನು ವಿವರಿಸಿದ್ದರು. ಸಿಜೆಐ ಚಂದ್ರಚೂಡ್ ಅವರು ತಮ್ಮ ಪುತ್ರಿಯರಾದ ಮಹಿ (16 ವರ್ಷ) ಮತ್ತು ಪ್ರಿಯಾಂಕಾ (20ವರ್ಷ) ಅವರಿಗೆ ನ್ಯಾಯಾಧೀಶರು ಎಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ವಕೀಲರು ಎಲ್ಲಿ ನಿಂತು ವಾದ ಮಂಡಿಸುತ್ತಾರೆ ಎಂಬುದನ್ನು ತೋರಿಸಿರುವುದಾಗಿ ವರದಿ ತಿಳಿಸಿದೆ.
ನಂತರ ಸಿಜೆಐ ಚಂದ್ರಚೂಡ್ ಅವರು ಇಬ್ಬರು ಸಾಕು ಮಕ್ಕಳನ್ನು ತಮ್ಮ ಕೊಠಡಿಗೆ ಕರೆದೊಯ್ದು ವಿವರಣೆ ನೀಡಿದ್ದರು. ಮೂಲಗಳ ಪ್ರಕಾರ, ಸುಪ್ರೀಂಕೋರ್ಟ್ ಹೇಗಿದೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದರಿಂದ ಸಿಜೆಐ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಸುಪ್ರೀಂಕೋರ್ಟ್ ಗೆ ಕರೆತರಲು ನಿರ್ಧರಿಸಿದ್ದರು ಎಂದು ವರದಿ ವಿವರಿಸಿದೆ.