ಕೋಲ್ಕತ್ತಾ : ಪಶ್ಚಿಮ ಬಂಗಾಳ ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಕೋಳಿ ಮಾಂಸ, ಹಣ್ಣುಗಳನ್ನು ಮಧ್ಯಾಹ್ನದ ಊಟದ ಮೆನುವಿನಲ್ಲಿ ಸೇರ್ಪಡೆ ಮಾಡಲು ನಿರ್ಧರಿಸಿದೆ.
Advertisement
ಶೀಘ್ರದಲ್ಲಿಯೇ ಗ್ರಾ.ಪಂ. ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.
ಮುಂದಿನ 4 ತಿಂಗಳ ಕಾಲ ಊಟದ ಜತೆಗೆ ಚಿಕನ್ ಹಾಗೂ ಆಯಾ ಋತುಮಾನದ ಹಣ್ಣುಗಳನ್ನು ನೀಡಲಾಗುತ್ತದೆ.
ಬಿಜೆಪಿ ಈ ನಿರ್ಧಾರವನ್ನು ಕಟುವಾಗಿ ಆಕ್ಷೇಪಿಸಿದ್ದು, ಗ್ರಾ.ಪಂ. ಹಾಗೂ ಲೋಕಸಭೆ ಚುನಾವಣೆಯಾಗಿ ಮಮತಾ ಬ್ಯಾನರ್ಜಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಟೀಕಿಸಿದೆ.