Advertisement

ಅಮೆರಿಕದ ಇಂಡಿಯಾನಾ ನೈಟ್ ಕ್ಲಬ್ ನಲ್ಲಿ ಶೂಟೌಟ್, ಯುವತಿ ಸೇರಿ ಇಬ್ಬರು ಸಾವು, ನಾಲ್ವರಿಗೆ ಗಾಯ

10:47 AM Jun 13, 2022 | Team Udayavani |

ವಾಷಿಂಗ್ಟನ್: ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಅಮೆರಿಕದ ಇಂಡಿಯಾನಾ ನೈಟ್ ಕ್ಲಬ್ ನಲ್ಲಿ ಭಾನುವಾರ (ಜೂನ್ 12) ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಜುಲೈ TO ಡಿಸೆಂಬರ್‌ ‘ಡಾಲಿ’ ರೈಡ್‌; ಧನಂಜಯ್‌ ಚಿತ್ರೋತ್ಸವ!

ಆಗ್ನೇಯ ಚಿಕಾಗೋದ ಗ್ಯಾರಿಯಲ್ಲಿ ಭಾನುವಾರ 2ಗಂಟೆಗೆ ನಡೆದ ಶೂಟೌಟ್ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. 34 ವರ್ಷದ ವ್ಯಕ್ತಿಯ ಶವ ಪ್ಲೇಯೊಸ್ ನೈಟ್ ಕ್ಲಬ್ ಪ್ರವೇಶದ್ವಾರದ ಬಳಿ ಇತ್ತು. ನೈಟ್ ಕ್ಲಬ್ ಒಳಗೆ 26 ವರ್ಷದ ಯುವತಿಯ ಶವ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನೈಟ್ ಕ್ಲಬ್ ನಲ್ಲಿ ಇತರ ನಾಲ್ವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿರುವುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಶೂಟೌಟ್ ನಲ್ಲಿ ಸಾವನ್ನಪ್ಪಿರುವವರ ಹೆಸರು ಮತ್ತು ಘಟನೆ ಕುರಿತು ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ ಎಂದು ವರದಿ ಹೇಳಿದೆ.

ಶೂಟೌಟ್ ನಡೆದ ನೈಟ್ ಕ್ಲಬ್ ಗೆ ಭಾರೀ ಪ್ರಮಾಣದಲ್ಲಿ ಭದ್ರತಾ ಏಜೆನ್ಸಿಯ ಅಧಿಕಾರಿಗಳು ದೌಡಾಯಿಸಿದ್ದು, ಜನರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಶೂಟೌಟ್ ಯಾವ ಕಾರಣಕ್ಕೆ ನಡೆಯಿತು, ಶೂಟೌಟ್ ನಡೆಸಿದ ವ್ಯಕ್ತಿಯ ಕುರಿತು ಯಾವುದೇ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿಲ್ಲ ಎಂದು ವರದಿ ವಿವರಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next