Advertisement

Chhota Rajan: ಹ*ತ್ಯೆ ಕೇಸ್-ಭೂಗತ ಪಾತಕಿ ಛೋಟಾ ರಾಜನ್‌ ಗೆ ಬೇಲ್;‌ ಆದ್ರೂ ಬಿಡುಗಡೆ ಇಲ್ಲ!

03:01 PM Oct 23, 2024 | Team Udayavani |

ಮುಂಬೈ: 2001ರಲ್ಲಿ ನಡೆದ ಮುಂಬೈ ಹೋಟೆಲ್‌ ಮಾಲೀಕರ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಜಗತ್ತಿನ ಪಾತಕಿ, ಗ್ಯಾಂಗ್‌ ಸ್ಟರ್‌ ಛೋಟಾ ರಾಜನ್‌ ಗೆ ಬಾಂಬೆ ಹೈಕೋರ್ಟ್‌ (Bombay Highcourt) ಬುಧವಾರ (ಅ.23) ಜಾಮೀನು ಮಂಜೂರು ಮಾಡಿದೆ.

Advertisement

ಹೈಕೋರ್ಟ್‌ ಪೀಠದ ಜಸ್ಟೀಸ್‌ ರೇವತಿ ಮೋಹಿತೆ ದೇರೆ ಮತ್ತು ಜಸ್ಟೀಸ್‌ ಪ್ರಥ್ವಿರಾಜ್‌ ಚವಾಣ್‌, ಗ್ಯಾಂಗ್‌ ಸ್ಟರ್‌ ಛೋಟಾ ರಾಜನ್‌ ಜಾಮೀನಿಗಾಗಿ ಒಂದು ಲಕ್ಷ ರೂ. ಬಾಂಡ್‌ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಹೋಟೆಲ್‌ ಮಾಲೀಕರ ಕೊ*ಲೆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದ್ದರೂ ಕೂಡಾ ಛೋಟಾ ರಾಜನ್‌ ಜೈಲುವಾಸ ಮುಂದುವರಿಯಲಿದೆ. ಅದಕ್ಕೆ ಕಾರಣ 2011ರ ಪತ್ರಕರ್ತ ಜ್ಯೋರ್ತಿಮಯಿ ಡೇ ಕೊ*ಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಒಳಗಾಗಿದ್ದು, ಇನ್ನಿತರ ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ.

ಮುಂಬೈಯಲ್ಲಿನ ಗೋಲ್ಡನ್‌ ಕ್ರೌನ್‌ ಹೋಟೆಲ್‌ ಮಾಲೀಕ ಜಯ ಶೆಟ್ಟಿ ಅವರ ಕೊ*ಲೆ ಪ್ರಕರಣದಲ್ಲಿ ಛೋಟಾ ರಾಜನ್‌ ನನ್ನು ವಿಶೇಷ ಕೋರ್ಟ್‌ ದೋಷಿ ಎಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು.

Advertisement

2001ರ ಮೇ 4ರಂದು ಛೋಟಾ ರಾಜನ್‌ ಬಣದ ಇಬ್ಬರು ಶಾರ್ಪ್‌ ಶೂಟರ್ಸ್‌ ಗಳು ಮೇಲಿನ ಫ್ಲೋರ್‌ ನಲ್ಲಿದ್ದ ಜಯ ಶೆಟ್ಟಿ ಅವರ ಮೇಲೆ ಗುಂಡಿನ ದಾಳಿ ನಡೆಸಿತ್ತು. ವಿಚಾರಣೆಯಲ್ಲಿ ಛೋಟಾ ರಾಜನ್‌ ಗ್ಯಾಂಗ್‌ ಹಫ್ತಾ ನೀಡುವಂತೆ ಬೆದರಿಕೆಯೊಡ್ಡಿತ್ತು. ಹಣ ಕೊಡದೇ ಇದ್ದ ಕಾರಣಕ್ಕೆ ಜಯ್‌ ಶೆಟ್ಟಿಯನ್ನು ಹ*ತ್ಯೆಗೈದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next