ರಾಯ್ಪುರ : ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಹಾಗೂ ಛತ್ತೀಸ್‌ಗಢ ಪೊಲೀಸರು ಸುಕ್ಮಾ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ 7 ನಕ್ಸಲರನ್ನು ಬಂಧಿಸುವಲ್ಲಿ ಗುರುವಾರ ಯಶಸ್ವಿಯಾಗಿದ್ದಾರೆ.
ನಕ್ಸಲ್ ಘಟಕವಾದ ನಿಮ್ಮಾಳ್ ಗುಡೇರ್ ರೆವಲ್ಯೂಷನರಿ ಪೀಪಲ್ಸ್ ಕೌನ್ಸಿಲ್‌ನ ನಕ್ಸಲರು ಸುಕಾ¾ ಜಿಲ್ಲೆಯ ಕೊಂಡವೈ ಗ್ರಾಮದಲ್ಲಿ ಅಡಗಿರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಬಂಧಿತ ನಕ್ಸಲರನ್ನು ಕಲ್ಮು ಸತ್ಯಂ, ಕಲ್ಮು ಜೋಗ, ಮಾದಿವಿ ಮಂಗ, ಮಡಕಮ್ ಐತಾ, ಕಿಕಿಡಿ ಜೋಗಾ, ವೊಂಡೋ ಉಂಗಾ, ಕಲ್ಮು ಭೀಮಾ ಎಂದು ಗುರುತಿಸಲಾಗಿದೆ.
ಬುಧವಾರ ತಡರಾತ್ರಿಯಲ್ಲಿ ಕಾರ್ಯಾಚರಣೆ ಆರಂಭಿಸಿ ಭದ್ರತಾಪಡೆಗಳು ನಕ್ಸಲರನ್ನು ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.