Advertisement

ಮತ್ತೆ ಸ್ಫೋಟಕ ಶತಕ ಸಿಡಿಸಿದ ಚೇತೇಶ್ವರ ಪೂಜಾರ

11:32 PM Aug 24, 2022 | Team Udayavani |

ಲಂಡನ್‌: ಭಾರತೀಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಅಂದ ಕೂಡಲೇ ನೆನಪಿಗೆ ಬರುವುದು ಟೆಸ್ಟ್‌ ಕ್ರಿಕೆಟ್‌!

Advertisement

ಟೆಸ್ಟ್‌ ಅಂದರೆ ಮೊದಲೇ ನಿಧಾನ, ಇಲ್ಲವರು ಇನ್ನಷ್ಟು ನಿಧಾನವಾಗಿ ಆಡಿ ಟೀಕೆಗೊಳಗಾಗಿದ್ದರು. ಅಂತಹ ಪೂಜಾರ ಐಪಿಎಲ್‌ ತಂಡಗಳಿಗೆ ಆಯ್ಕೆಯಾದರೂ, 11ರ ಬಳಗದಲ್ಲಿ ಸ್ಥಾನ ಪಡೆದಿದ್ದು ಹುಡುಕಿದರೆ ಮಾತ್ರ ಸಿಗುವಂತಹ ಘಟನೆ!

ಈಗವರು ಬದಲಾಗಿದ್ದಾರೆ, ಎಷ್ಟು ಬದಲಾಗಿ ದ್ದಾರೆ ಎಂದರೆ ಅತ್ಯಂತ ಸ್ಫೋಟಕ ಆಟಗಾರರನ್ನು ಸರಿಗಟ್ಟುವಂತೆ ಬದಲಾಗಿದ್ದಾರೆ. ಇದಕ್ಕೆ ಉದಾಹರಣೆ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ರಾಯಲ್‌ ಲಂಡನ್‌ ಏಕದಿನ ಕಪ್‌.

ಈ ಕೂಟದಲ್ಲಿ ಅವರು ಮೂರು ಶತಕ ಗಳಿಸಿದ್ದಾರೆ. ಅದರಲ್ಲಿ ಸತತ ಎರಡು ಶತಕವೂ ಸೇರಿದೆ. ಮಂಗಳವಾರ ಸಸೆಕ್ಸ್‌ ತಂಡದ ನಾಯಕನಾಗಿ ಅವರು ಕೇವಲ 90 ಎಸೆತಗಳಲ್ಲಿ 132 ರನ್‌ ಚಚ್ಚಿದ್ದಾರೆ. ಇದರಲ್ಲಿ 20 ಬೌಂಡರಿ, 2 ಸಿಕ್ಸರ್‌ ಸೇರಿವೆ. ಇದರ ಪರಿಣಾಮ ಸಸೆಕ್ಸ್‌ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 400 ರನ್‌ ಕಲೆಹಾಕಿತು. ಮಿಡ್ಲ್ಸೆಕ್ಸ್‌ 243 ರನ್‌ಗಳಿಗೆ ಆಲೌಟಾಗಿ ಸೋತುಹೋಯಿತು.

ಬರೀ ಇಷ್ಟೇ ಆಗಿದ್ದರೆ ಏನೋ ಆಯಿತು ಎಂದುಕೊಳ್ಳಬಹುದಿತ್ತು. ಆದರೆ ಹಾಗಾಗಿಲ್ಲ. ಆ. 12ರಂದು ಪೂಜಾರ ವಾರ್ವಿಕ್‌ಶೈರ್‌ ಎದುರು ಅಬ್ಬರಿಸಿದ್ದರು. ಅಲ್ಲಿ 79 ಎಸೆತಗಳಲ್ಲಿ 107 ರನ್‌ ಚಚ್ಚಿದ್ದರು. ಆ.14ರಂದು ಸರ್ರೆ ಎದುರು ಕೇವಲ 131 ಎಸೆತಗಳಲ್ಲಿ 174 ರನ್‌ ಚಚ್ಚಿದ್ದರು.

Advertisement

ಮುಂದಿನೆರಡು ಪಂದ್ಯಗಳಲ್ಲಿ ಕ್ರಮವಾಗಿ 49, 66 ರನ್‌ ಗಳಿಸಿದ್ದರು. ಎಲ್ಲೂ ಅವರು ನಿಧಾನವಾಗಿ ಆಡಿಲ್ಲ. ಇದು ಸ್ಪಷ್ಟವಾಗಿ ಪೂಜಾರ ತಮ್ಮ ಟೀಕಾಕಾರರಿಗೆ ಬ್ಯಾಟ್‌ನಿಂದಲೇ ನೀಡಿದ ಉತ್ತರ. ಮುಂದವರು ಐಪಿಎಲ್‌ ಫ್ರಾಂಚೈಸಿಗಳ ಪಾಲಿನ ಮೆಚ್ಚಿನ ಆಟಗಾರರಾಗಿ ಆಯ್ಕೆಯಾಗುವುದು ಖಚಿತ ವೆಂದು ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next