Advertisement

ಕೌಂಟಿ ಪಂದ್ಯ: ಚೇತೇಶ್ವರ ಪೂಜಾರ ಅಜೇಯ ದ್ವಿಶತಕ

11:03 PM Jul 20, 2022 | Team Udayavani |

ಲಂಡನ್‌: ಮಿಡ್ಲ್ ಸೆಕ್ಸ್‌ ತಂಡದೆದುರಿನ ಕೌಂಟಿ ಪಂದ್ಯದಲ್ಲಿ ಸಸೆಕ್ಸ್‌ ತಂಡದ ನಾಯಕರೂ ಆಗಿರುವ ಭಾರತದ ಚೇತೇಶ್ವರ ಪೂಜಾರ ದ್ವಿಶತಕ ಬಾರಿಸಿದ್ದಾರೆ.

Advertisement

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ದಿನ ಪೂಜಾರ ದ್ವಿಶತಕ ಪೂರ್ತಿಗೊಳಿಸಿದ್ದಾರೆ. ಒಟ್ಟಾರೆ 403 ಎಸೆತ ಎದುರಿಸಿದ ಅವರು 231 ರನ್‌ ಗಳಿಸಿ ಕೊನೆಯವರಾಗಿ ಔಟಾದರು. ಪ್ರಸಕ್ತ ಕೌಂಟಿ ಋತುವಿನಲ್ಲಿ ಪೂಜಾರ ಈಗಾಗಲೇ 2 ಶತಕ ಸಿಡಿಸಿದ್ದು 766 ರನ್‌ ಗಳಿಸಿದ್ದಾರೆ. ಇಲ್ಲಿ ದ್ವಿಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಪೂಜಾರ ದ್ವಿಶತಕ (231) ಮತ್ತು ಟಾಮ್‌ ಅಲ್ಸೊàಪ್‌ (135) ಅವರ ಶತಕದಿಂದಾಗಿ ಸಸೆಕ್ಸ್‌ ತಂಡವು 523 ರನ್‌ ಗಳಿಸಿ ಆಲೌಟಾಗಿದೆ.

ತಂಡದ ನಾಯಕ ಟಾಮ್‌ ಹೇನ್ಸ್‌ ಗಾಯಾಳಾದ ಕಾರಣ ಪೂಜಾರ ಅವರಿಗೆ ನಾಯಕತ್ವದ ಹೊಣೆಗಾರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next