Advertisement

ಚೇತನ್‌ ಮುಂಡಾಡಿ ಸೆಕೆಂಡ್‌ ಎಂಟ್ರಿ! 

02:53 PM Jul 19, 2018 | |

ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್‌ ಮುಂಡಾಡಿ ಎರಡನೇ ಬಾರಿಗೆ ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಡುವ ತವಕದಲ್ಲಿದ್ದು, ಹೆಚ್ಚಾ ಕಡಿಮೆ ತನ್ನ ಎರಡನೇ ಸಿನೆಮಾವನ್ನು ಆ. 28ರಿಂದ ಶೂಟಿಂಗ್‌ ನಡೆಸಲಿದ್ದಾರೆ.  ತಮ್ಮ ಮೊದಲ ಚಿತ್ರ ‘ಮದಿಪು’ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಗೆದ್ದುಕೊಂಡ ಮುಂಡಾಡಿ ಗೋವಿನ ವಿಚಾರವನ್ನು ಮುಂದಿಟ್ಟು ಸಿನೆಮಾ ಮಾಡಲಿದ್ದಾರೆ. ಕರಾವಳಿ ಭಾಗದಲ್ಲಿ ಗೋವಿನ ಪ್ರಾಮುಖ್ಯತೆ, ಗೋವಿನಿಂದಾಗುವ ರಾಜಕೀಯ ಹಾಗೂ ಇನ್ನಿತರ ಎಗ್ಗೆಗಳನ್ನು ಸೇರಿಸಿಕೊಂಡು ಎರಡನೇ ಸಿನೆಮಾ ಮಾಡಲಿದ್ದಾರೆ. ಕುಂದಾಪುರದಲ್ಲಿ ನಡೆದ ಗೋಹತ್ಯೆ ಗಲಭೆ ಕುರಿತ ನೈಜ ಘಟನೆ ಈ ಚಿತ್ರದ ಕಥೆ ಎಂದು ಅವರು ಈಗಾಗಲೇ ತಿಳಿಸಿದ್ದಾರೆ.

Advertisement

ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಈ ಘಟನೆ ಈಗ ಸಿನೆಮಾ ರೂಪ ಪಡೆದುಕೊಳ್ಳುತ್ತಿದೆ. ಕರಾವಳಿ ಮೂಲದವರಾದ ಚೇತನ್‌ ಮುಂಡಾಡಿ ಇಂಥ ನೈಜ ಘಟನೆಗಳನ್ನು ಖುದ್ದು ನೋಡಿ ಅದರ ನಡುವೆಯೇ ಬೆಳೆದಿದ್ದು, ಅಲ್ಲಿನ ಜನಜೀವನ, ಧರ್ಮ ಮತ್ತು ಬದುಕಿನ ನಡುವಿನ ಸಂಘರ್ಷಗಳನ್ನು ಹತ್ತಿರದಿಂದ ನೋಡಿದ್ದಾರೆ. ಇದು ಚಿತ್ರಕತೆ ಆಯ್ಕೆ ವಿಚಾರದಲ್ಲಿ ದೊಡ್ಡ ತಿರುವು ನೀಡಿದೆ.  ಅಂದಹಾಗೆ, ಕತೆ, ಚಿತ್ರಕತೆ, ಸಂಭಾಷಣೆ ಚೇತನ್‌ ಮುಂಡಾಡಿ, ವಿನು ಬಳಂಜ ಮತ್ತು ಅಕ್ಷಯ್‌ ಕಥೆ ವಿಸ್ತರಿಸಿದ್ದಾರೆ.  ಈ ಚಿತ್ರಕ್ಕೂ ಮದಿಪು ಚಿತ್ರದ ತಂತ್ರಜ್ಞರ ಬಹುತೇಕ ತಂಡವನ್ನೇ ಮುಂದುವರಿಸಲು ನಿರ್ಧರಿಸಿದ್ದಾರೆ. ವಿ.ಮನೋಹರ್‌ ಸಂಗೀತ, ಛಾಯಾಗ್ರಾಹಣ- ಗಣೇಶ್‌ ಹೆಗಡೆ, ಉಗ್ರಂ ಶ್ರೀಕಾಂತ್‌ ಎಡಿಟಿಂಗ್‌ ವಿಭಾಗದಲ್ಲಿ ಕೆಲಸ ಮಾಡಲಿದ್ದಾರೆ ಎಂಬುದು ಸದ್ಯದ ಮಾಹಿತಿ.  

Advertisement

Udayavani is now on Telegram. Click here to join our channel and stay updated with the latest news.

Next